Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಇವು ಕಾರಣಗಳಿರಬಹುದು

ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಇವು ಕಾರಣಗಳಿರಬಹುದು
ಬೆಂಗಳೂರು , ಶುಕ್ರವಾರ, 1 ಡಿಸೆಂಬರ್ 2017 (08:49 IST)
ಬೆಂಗಳೂರು: ಪುರುಷರಲ್ಲಿ ಲೈಂಗಿಕ ನಿರಾಸಕ್ತಿಗೆ ಹಲವು ಕಾರಣಗಳಿರಬಹುದು. ಮೂಡ್ ಬದಲಾವಣೆ ಅಥವಾ ಇನ್ನು ಹಲವು ಕಾರಣಗಳಿಂದ ಪುರುಷರು ಸೆಕ್ಸ್ ನಿಂದ ವಿಮುಖರಾಗಬಹುದು. ಆ ಕಾರಣಗಳು ಯಾವುವು ನೋಡೋಣ.
 

ಒತ್ತಡ
ಮನಸ್ಸು ಒತ್ತಡದಲ್ಲಿದ್ದರೆ ಏನೂ ಬೇಡವೆನಿಸುವುದು ಸಹಜ. ಒತ್ತಡ ಮಾನಸಿಕ ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಒತ್ತಡಕ್ಕೊಳಗಾಗಿದ್ದರೆ, ಮನಸ್ಸು ಖಿನ್ನವಾಗುತ್ತದೆ, ಸೆಕ್ಸ್ ಬೇಡವೆನಿಸುತ್ತದೆ.

ಆತ್ಮವಿಶ್ವಾಸದ ಕೊರತೆ
ಆತ್ಮ ವಿಶ್ವಾಸ ಕುಂದಿದೆ ಎಂದಾದರೆ ನಮ್ಮಲ್ಲೇ ಒಂದು ಕೀಳರಿಮೆ ಹುಟ್ಟಿಕೊಳ್ಳುತ್ತದೆ. ಇದೇ ಕೀಳರಿಮೆ ನಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ನಮಗೇ ಸಂಶಯ ಉಂಟು ಮಾಡುವಂತೆ ಮಾಡುತ್ತದೆ.

ಮದ್ಯಪಾನ
ಮದ್ಯಪಾನ ಎನ್ನುವುದು ತಾತ್ಕಾಲಿಕವಾಗಿ ದುಃಖ ಮರೆಯುವ ಸಾಧನ ಎನ್ನುತ್ತಾರೆ. ಆದರೆ ಇದು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಬದಲಿಗೆ ಸಮಸ್ಯೆಗೆ ಮೂಲ. ಇದು ಲೈಂಗಿಕ ಆಸಕ್ತಿಗೆ ಅಡ್ಡಿಯಾಗುತ್ತದೆ.

ನಿದ್ರಾಹೀನತೆ
ಲೈಂಗಿಕ ಜೀವನ ಸುಗಮವಾಗಿರಲು ಮನಸ್ಸು, ದೇಹ ರಿಲ್ಯಾಕ್ಸ್ ಆಗಿರಬೇಕು. ಆದರೆ ನಿದ್ರೆಯಿಲ್ಲದೇ ದೇಹ ಮತ್ತು ಮನಸ್ಸು ಸುಸ್ತಾಗಿರುವಾಗ ಲೈಂಗಿಕತೆ ಬಗ್ಗೆ ಆಸಕ್ತಿ ಹೇಗೆ ಬರಬೇಕು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಚಿಕೆ ಹುಡುಗನ ಪ್ರೀತಿಸಬೇಕು! ಕಾರಣವೇನು ಗೊತ್ತಾ?