ಬೆಂಗಳೂರು: ಕೆಲವು ಆಹಾರ ವಸ್ತುಗಳನ್ನು ಬೇಯಿಸಿ ತಿಂದರೆ ಅದರ ಸತ್ವ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಕೆಲವು ಆಹಾರಗಳನ್ನು ಹಸಿಯಾಗಿ ತಿನ್ನದೇ ಇದ್ದರೆ ಒಳ್ಳೆಯದು. ಅವುಗಳು ಯಾವುವು ನೋಡೋಣ.
ಆಲೂಗಡ್ಡೆ
ಕೆಲವರಿಗೆ ಹಸಿ ಆಲೂಗಡ್ಡೆ ಉಪ್ಪು ಖಾರ ಹಾಕಿಕೊಂಡು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಆಲೂಗಡ್ಡೆ ನೆಲದ ಅಡಿಯಲ್ಲಿ ಬೆಳೆಯುವ ತರಕಾರಿ ಆದ್ದರಿಂದ ಹೆಚ್ಚು ಕ್ರಿಮಿ ನಾಶಕಗಳನ್ನು ಬಳಸಿ ಬೆಳೆಸುತ್ತಾರೆ. ಹೀಗಾಗಿ ಇದನ್ನು ಹಸಿ ತಿನ್ನದೇ ಇರುವುದೇ ಒಳಿತು.
ಬಸಳೆ/ಪಾಲಕ್ ಸೊಪ್ಪು
ಸೊಪ್ಪು ತರಕಾರಿ ಆರೋಗ್ಯಕ್ಕೆ ಒಳ್ಳೆಯದೇನೋ ನಿಜ. ಆದರೆ ಹಸಿ ಸೊಪ್ಪು ತರಕಾರಿಯಲ್ಲಿ ಬ್ಯಾಕ್ಟೀರಿಯಾ ಅಂಶ ಹೆಚ್ಚಿದ್ದು ಇದು ಆರೋಗ್ಯಕ್ಕೆ ಹಾನಿ ಮಾಡಬಹುದು.
ಟೊಮೆಟೊ
ಸಾಮಾನ್ಯವಾಗಿ ಸಲಾಡ್ ಗಳನ್ನು ಹಸಿ ಟೊಮೆಟೋವನ್ನು ಹೆಚ್ಚು ಬಳಸುತ್ತೇವೆ. ಆದರೆ ಟೊಮೆಟೋದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಬೇಯಿಸಿ ಸೇವಿಸುವುದು ಒಳಿತು.
ಕ್ಯಾರಟ್
ಅತೀ ಹೆಚ್ಚು ಹಸಿಯಾಗಿ ಸೇವಿಸುವ ತರಕಾರಿ ಎಂದರೆ ಕ್ಯಾರೆಟ್. ಇದೂ ಕೂಡಾ ಆಲೂಗಡ್ಡೆಯಂತೆ ಮಣ್ಣಿನಡಿಯಲ್ಲಿ ಬೆಳೆಯುವ ತರಕಾರಿ ಆದ್ದರಿಂದ ಹೆಚ್ಚು ವಿಷಾಂಶವಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ