ಬೆಂಗಳೂರು : ಕೆಲವರಿಗೆ ಕಣ್ಣಿನ ರೆಪ್ಪೆಯ ಕೆಳಭಾಗದಲ್ಲಿ ಗುಳ್ಳೆಗಳಾಗುತ್ತದೆ. ಆದರೆ ಈ ಗುಳ್ಳೆಗಳನ್ನು ಯಾವುದೇ ಕಾರಣಕ್ಕೂ ಒಡೆದುಕೊಳ್ಳಬಾರದಂತೆ. ಒಂದು ವೇಳೆ ಹೀಗೆ ಮಾಡಿದರೆ ತುಂಬಾ ಅಪಾಯವಂತೆ.
ಹೌದು. ಈ ಗುಳ್ಳೆಗಳನ್ನು ಇತರೆ ಗುಳ್ಳೆಗಳಂತೆ ಕೈಯಿಂದ ಅಥವಾ ಬೇರೆ ಯಾವ ಚೂಪಾದ ವಸ್ತುವಿನಿಂದ ಒಡೆದುಕೊಳ್ಳಲೇ ಬಾರದು. ಏಕೆಂದರೆ, ಈ ಬ್ಯಾಕ್ಟೀರಿಯಾ ಸೋಂಕು ನಿಮ್ಮ ಕಣ್ಣಿನ ರೆಪ್ಪೆಯ ಇತರೆ ಭಾಗಗಳಿಗೂ ಹರಡುತ್ತದೆ ಮತ್ತು ಕಣ್ಣಿನ ಕೇಂದ್ರ ಭಾಗಗಳಿಗೂ ಹರಡುವ ದೊಡ್ಡ ಅಪಾಯ ಇರುತ್ತದೆ. ಇನ್ನೂ ಕೆಲವೊಂದು ವಿರಳ ಪ್ರಕರಣಗಳಲ್ಲಿ ಈ ಸೋಂಕು ಮೆದುಳಿಗೂ ಹರಡಿ, ಮಾರಣಾಂತಿಕ ಆಗಬಹುದಂತೆ.
ಈ ಸೋಂಕು ಕಡಿಮೆ ಮಾಡಲು ಒಂದು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಬಿಸಿ ಮಾಡಿ ಅಥವಾ ಬಿಸಿನೀರನ್ನು ವಾಟರ್ ಬ್ಯಾಗ್ ಅಲ್ಲಿ ಕಟ್ಟಿಕೊಂಡು ನಿಮ್ಮ ಕಣ್ಣಿನ ಗುಳ್ಳೆಗೆ ಬಿಸಿ ನೀಡಿಕೊಳ್ಳಿ. ಇದು ಸೋಂಕು ಕರಗುವಂತೆ ಮಾಡುತ್ತದೆ. ಒಂದು ವೇಳೆ ತುಂಬಾ ನೋವು ಕಾಣಿಸಿಕೊಂಡರೆ ವೈದ್ಯರನ್ನ ಭೇಟಿ ಮಾಡುವುದು ಅಗತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.