ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಸಹೋದರ ದಿನಕರ ತೂಗುದೀಪ ಸಂಚರಿಸುತ್ತಿದ್ದ ಕಾರು ಭಾನನುವಾರದಂದು ಅಪಘಾತಕ್ಕೀಡಾಗಿದೆ.
ಯಲಹಂಕದಲ್ಲಿ ನಡೆದ 'ಪುರುಸೋತ್ ರಾಮ' ಚಿತ್ರದ ಮುಹೂರ್ತ ಸಮಾರಂಭಕ್ಕೆ ಹೋಗುತ್ತಿದ್ದ ವೇಳೆ ದಿನಕರ್ ಅವರ ಕಾರಿಗೆ ಅನಿರೀಕ್ಷಿತವಾಗಿ ಬೈಕೊಂದು ಎದುರಾದ ಕಾರಣ ಈ ಘಟನೆ ಸಂಭವಿಸಿದೆ.
ಅಪಘಾತದಿಂದಾಗಿ ವಾಹನಗಳಿಗೆ ಸಣ್ಣಪುಟ್ಟ ಏಟಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಸವಾರರಿಗೆ ಯಾವುದೇ ಏಟಾಗಿಲ್ಲ. ದಿನಕರ್ ತೂಗುದೀಪ ಅವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.