ಬೆಂಗಳೂರು : ದಪ್ಪಗಿದ್ದವರು ತೂಕ ಇಳಿಸಿಕೊಂಡಾಗ ಅವರ ಚರ್ಮ ಜೋತುಬೀಳುತ್ತದೆ. ಈ ರೀತಿ ಜೋತುಬಿದ್ದ ಚರ್ಮವನ್ನು ಕೆಲವು ಮನೆಮದ್ದುಗಳಿಂದ ಸರಿಪಡಿಸಿಕೊಳ್ಳಬಹುದು.
ಮೊಟ್ಟೆಯನ್ನು ಒಡೆದು, ಅದರ ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ನೊರೆ ಬರುವವರೆಗೂ ಸ್ಪೂನ್ ಅಲ್ಲಿ ಚೆನ್ನಾಗಿ ಕಲಿಸಿಕೊಳ್ಳಿ . ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.
ಆಲೋ ವೆರಾದ ಜೆಲ್ ಅನ್ನು ಹೊರತೆಗೆದು, ಅದನ್ನು ನಿಮ್ಮ ಮುಖ, ಕತ್ತು ಮತ್ತು ಇತರೆ ಹಾನಿಯಾದ ಭಾಗಗಳಿಗೆ ಹಚ್ಚಿಕೊಳ್ಳಿ. ಅದನ್ನು ಹಾಗೆಯೇ 15-20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ವಾರದಲ್ಲಿ ಹಲವು ಬಾರಿ ಮಾಡಬಹುದು.
ಆಲಿವ್ ಆಯಿಲ್, ನಿಂಬೆ ರಸ, ಕೆಲವು ಸ್ಪೂನ್ ಅಷ್ಟು ಜೇನುತುಪ್ಪ - ಈ ಮೂರನ್ನೂ ಬೆರೆಸಿಕೊಂಡು ಅದನ್ನು ಕುತ್ತಿಗೆಗೆ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಅದರ ಮೇಲೆ ಬೆರಳುಗಳಿಂದ ಮೆಲ್ಲನೆ ತಟ್ಟಿಕೊಳ್ಳುತ್ತ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ದಿನಕ್ಕೆ 1-2 ಬಾರಿ ಮಾಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.