ಬೆಂಗಳೂರು: ಸೆಕ್ಸ್ ನಂತರ ಕೆಲವು ಮಹಿಳೆಯರು ಹೇಳಲಾಗದ ನೋವಿನಿಂದ ಒದ್ದಾಡುತ್ತಾರೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದರ ಕಾರಣ ಮತ್ತು ಪರಿಹಾರವೇನೆಂದು ನೋಡೋಣ.
ಒಣಗಿದ ಗುಪ್ತಾಂಗ
ಮಿಲನ ಕ್ರಿಯೆ ಸಂದರ್ಭ ನೋವಾಗುವುದಕ್ಕೆ ಮುಖ್ಯ ಕಾರಣ ಒಣಗಿದ ಯೋನಿ. ವೈದ್ಯರ ಸಲಹೆ ಮೇರೆಗೆ ಯಾವುದಾದರೂ ತೇವಾಂಶ ನೀಡುವ ಕ್ರೀಂ ಬಳಸುವುದು ಉತ್ತಮ.
ಗರ್ಭನಿರೋಧಕ ಗುಳಿಗೆ
ಗರ್ಭನಿರೋಧಕ ಗುಳಿಗೆಗಳಿಂದ ಯೋನಿ ತೇವಾಂಶ ಕಳೆದುಕೊಳ್ಳಬಹುದು. ಈ ಗುಳಿಗೆಗಳು ಹಾರ್ಮೊನ್ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಗರ್ಭಕೋಶದ ಸ್ನಾಯು
ಕೆಲವೊಂದು ಸಂದರ್ಭದಲ್ಲಿ ಗರ್ಭಕೋಶದ ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದಾಗಿ ನೋವುಂಟಾಗಬಹುದು. ಇದಕ್ಕೆ ಗರ್ಭಕೋಶಕ್ಕೆ ವ್ಯಾಯಾಮ ನೀಡುವ ದೈಹಿಕ ಕಸರತ್ತು ನಡೆಸಿ.
ಕ್ಯಾನ್ಸರ್!
ಈ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದು ತೀರಾ ವಿರಳವಾದರೂ ಸೆಕ್ಸ್ ಸಂದರ್ಭದಲ್ಲಿ ಉಂಟಾಗುವ ಅಸಹಜ ನೋವಿಗೆ ಕ್ಯಾನ್ಸರ್ ರೋಗದ ಲಕ್ಷಣಗಳೂ ಕಾರಣವಾಗಬಹುದು. ಹಾಗಾಗಿ ತಕ್ಷಣ ತಜ್ಞ ವೈದ್ಯರನ್ನ ಸಂಪರ್ಕಿಸುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ