ಬೆಂಗಳೂರು: ಹಾಗಲಕಾಯಿ ಕಹಿ ಎಂದು ದೂರ ತಳ್ಳುವವರೇ ಜಾಸ್ತಿ. ಆದರೆ ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ನೀಡುವ ಲಾಭ ಒಂದೆರಡಲ್ಲ.
ಮುಖ್ಯವಾಗಿ ಹಾಗಲಕಾಯಿ ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿಡುವುದಲ್ಲದೆ, ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ಕ್ಯಾಲೊರಿಯೂ ಕಡಿಮೆಯಿದ್ದು, ಶರೀರಕ್ಕೆ ಅಗತ್ಯವಾದ ಕೊಬ್ಬು ಬಿಡುಗಡೆ ಮಾಡಲು ಪಿತ್ತಜನಕಾಂಗಕ್ಕೆ ನೆರವಾಗುತ್ತದೆ.
ಮಾಡೋದು ಹೇಗೆ ಅಂತ ಚಿಂತೇನಾ? ತುಂಬಾ ಸಿಂಪಲ್. ಹಾಗಲಕಾಯಿನ್ನು ಕತ್ತರಿಸಿಕೊಂಡು ಅದಕ್ಕೆ ಅರಸಿನ ಪುಡಿ ಮತ್ತು ಉಪ್ಪು ಹಾಕಿಕೊಂಡು ಸ್ವಲ್ಪ ಹೊತ್ತು ಬಿಡಿ. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ರಸ ತೆಗೆಯರಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಿಕೊಂಡು ಕುಡಿಯಿರಿ. ನಿಯಮಿತವಾಗಿ ಕುಡಿಯುತ್ತಿದ್ದರೆ ಆರೋಗ್ಯಕ್ಕೆ ಭಾರೀ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ