Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲ್ಲು ಹಳದಿಗಟ್ಟಿದೆಯೇ? ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ ಇದನ್ನು ಟ್ರೈ ಮಾಡಿ!

ಹಲ್ಲು ಹಳದಿಗಟ್ಟಿದೆಯೇ? ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ ಇದನ್ನು ಟ್ರೈ ಮಾಡಿ!
ಬೆಂಗಳೂರು , ಮಂಗಳವಾರ, 5 ಸೆಪ್ಟಂಬರ್ 2017 (08:08 IST)
ಬೆಂಗಳೂರು: ಹೆಚ್ಚಿನವರಿಗೆ ಇದೇ ಸಮಸ್ಯೆ. ಹಲ್ಲು ಹಳದಿಗಟ್ಟಿ ಎಲ್ಲರ ಎದುರು ಹೃದಯ ಪೂರ್ವಕವಾಗಿ ನಗಲೂ ಹಿಂಜರಿಯುವಂತಾಗುತ್ತದೆ. ಅಂತಹವರು ಈ ಎರಡು ವಿಧಾನ ಟ್ರೈ ಮಾಡಿ.

 
ಎಳ್ಳಿನ ಕಾಳಿನ ಪೇಸ್ಟ್
ಎಳ್ಳು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಇದರಲ್ಲಿ ನಿಮ್ಮ ಹಲ್ಲು ಬಿಳಿಯಾಗಿಸುವ ಶಕ್ತಿ ಇದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಎಳ್ಳನ್ನು ಪೇಸ್ಟ್ ಮಾಡಿಕೊಂಡು ವಾರಕ್ಕೆ   ಎರಡು ಅಥವಾ ಮೂರು ಬಾರಿ ಹಚ್ಚಿಕೊಂಡು, ಬಾಯಿ ತೊಳೆದುಕೊಳ್ಳಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ ಹಲ್ಲಿನ ಹಳದಿಗಟ್ಟುವಿಕೆ ತಡೆಗಟ್ಟಬಹುದು. ಎಳ್ಳಿನಲ್ಲಿರುವ ಕ್ಯಾಲ್ಶಿಯಂ ಅಂಶ ಹಲ್ಲಿನ ಸಂರಕ್ಷಣೆಗೆ ಉತ್ತಮ.

ಕಿತ್ತಳೆ ಮತ್ತು ನಿಂಬೆಹಣ್ಣಿನ ಸಿಪ್ಪೆಯ ಪುಡಿ
ಕಿತ್ತಳೆ ಮತ್ತು ನಿಂಬೆ ಹಣ್ಣು ಉಪಯೋಗಿಸಿದ ಬಳಿಕ ಸಿಪ್ಪೆಯನ್ನು ಬಿಸಾಕಬೇಡಿ. ಇದನ್ನು ಒಣಗಿಸಿಕೊಂಡು ಹದ ಬಿಸಿ ನೀರಿನಲ್ಲಿ ವಾರಕ್ಕೆ ಎರಡು ಬಾರಿ ಹಲ್ಲು ಉಜ್ಜಿಕೊಂಡರೆ ಹಲ್ಲಿನ ಹಳದಿಗಟ್ಟುವಿಕೆ ನಿವಾರಣೆಯಾಗಿ ಮಲ್ಲಿಗೆಯಂತಹ ಹಲ್ಲು ನಿಮ್ಮದಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದಲ್ಲಿ ಈ ತಿನಿಸುಗಳಿಂದ ದೂರವಿರಿ… ಆರೋಗ್ಯ ಕಾಪಾಡಿ…