ಮೆದುಳು ದಿನಗಳೆದಂತೆ ನೆನಪುಗಳ ಆಗರವಾಗಬಹುದು, ಇಲ್ಲವೇ ಮರೆವಿನ ಸಾಗರವಾಗಬಹುದು. ಆದರೆ ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ಮೆದುಳಿನ ಕಾರ್ಯ ಕ್ಷಮತೆ ಮತ್ತು ದಕ್ಷತೆಯನ್ನು ಮೊದಲಿನಷ್ಟೇ ಪ್ರಖರವಾಗಿರಿಸಿಕೊಳ್ಳಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹಾಗಾದರೆ ಯಾವೆಲ್ಲಾ ಅಂಶಗಳು ಮೆದುಳನ್ನು ಚುರುಕಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅನ್ನೋದು ಇಲ್ಲಿದೆ ನೋಡಿ.
ಹೌದು, ಮೆದುಳು ದಿನಗಳೆದಂತೆ ನೆನಪುಗಳ ಆಗರವಾಗಬಹುದು, ಇಲ್ಲವೇ ಮರೆವಿನ ಸಾಗರವಾಗಬಹುದು. ಆದರೆ ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ಮೆದುಳಿನ ಕಾರ್ಯ ಕ್ಷಮತೆ ಮತ್ತು ದಕ್ಷತೆಯನ್ನು ಮೊದಲಿನಷ್ಟೇ
ಪ್ರಖರವಾಗಿರಿಸಿಕೊಳ್ಳಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹಾಗಾದರೆ ಯಾವೆಲ್ಲಾ ಅಂಶಗಳು ಮೆದುಳನ್ನು ಚುರುಕಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅನ್ನೋದು ಇಲ್ಲಿದೆ ನೋಡಿ.
ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುವ ಐಡಿಯಾಗಳಿವು
ಮೈಕ್ರೋಸಾಫ್ಟ್ ಅಥವಾ ಆ್ಯಪಲ್ ಮೆದುಳಿನ ದಕ್ಷತೆ ಹೆಚ್ಚಿಸಲು ಪ್ರೊಸೆಸರ್ಗಳನ್ನು ಉತ್ಪಾದಿಸುವುದಿಲ್ಲ. ತೀಕ್ಷ್ಣ ಮತಿಗಳು ಸ್ವತಃ ನೀವೇ ಪ್ರಯತ್ನಪಡಬೇಕು. ಇದಕ್ಕೆ ವಯಸ್ಸಿನ ಬೇಧವಿಲ್ಲ. ಯಾವ ವಯಸ್ಸಿನಲ್ಲಾದ್ರೂ ನೀವು ನಿಮ್ಮ ಮೆದುಳಿನ ಕಾರ್ಯಕ್ಷಮತೆ ಸಾಧಿಸಬಹುದು.
ಮೆದುಳಿನ ಆಟಗಳನ್ನು ಆಡಿ
ಕಲಿಕೆಯ ಆರಂಭಿಕ ಹಂತದಲ್ಲಿ ಮಕ್ಕಳು ಒಗಟುಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸುವ ಶಿಕ್ಷಣವನ್ನು ಬಾಲ್ಯದಲ್ಲಿ ನೀಡಲಾಗುತಿತ್ತು. ಇದು ಅವರ ಅರಿವಿನ ಬೆಳವಣಿಗೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿತ್ತು. ಈ ನಿಟ್ಟಿನಲ್ಲಿ ಮನುಷ್ಯ ಎಷ್ಟೇ ವಯಸ್ಸಾದರೂ ಸಹ ಈ ಆಟಗಳನ್ನು ಬಿಡದೇ ಅಭ್ಯಾಸ ಮಾಡಿದರೇ ಮೆದುಳು ಮೊದಲಿನಷ್ಟೇ ಚುರುಕುತನದಿಂದ ಕೂಡಿರುತ್ತದೆ ಎನ್ನುವುದಕ್ಕೆ ಹಲವಾರು ಪುರಾವೆಗಳಿವೆ.
ಜಿಗ್ಸಾ ಒಗಟುಗಳು, ಕಾರ್ಡ್ ಆಟಗಳು, ರಸಪ್ರಶ್ನೆಗಳು ಮತ್ತು ಇತರ ಮೆದುಳಿನ ಆಟಗಳಲ್ಲಿ ತೊಡಗಿಕೊಳ್ಳುವುದು. ಈ ರೀತಿ ಮೆದುಳಿಗೆ ಕಸರತ್ತು ನೀಡುವ ಮೂಲಕ ಮೆದುಳನ್ನು ಚುರುಕುಗೊಳಿಸಬಹುದು ಎಂದು ಅಧ್ಯಯನಗಳಲ್ಲಿ ತೋರಿಸಲಾಗಿದೆ. ವಿಶ್ಲೇಷಣಾತ್ಮಕ ಕೌಶಲ್ಯಗಳು, ಸ್ಮರಣೆ, ಸೃಜನಶೀಲತೆ ಮತ್ತು ಚಿಂತನೆ ಎಲ್ಲವನ್ನೂ ಮೆದುಳಿನ ಆಟಗಳ ಮೂಲಕ ಚೆನ್ನಾಗಿ ಸುಧಾರಿಸಬಹುದು.
ಹೊಸ ಭಾಷೆ ಕಲಿಯಿರಿ
ಎರಡು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ವ್ಯಕ್ತಿಯ ಮೆದುಳು ದೀರ್ಘಕಾಲದವರೆಗೆ ಚುರುಕುತನದಿಂದಿರಲು ನೆರವಾಗುತ್ತದೆ. ಹಲವಾರು ಅಧ್ಯಯನಗಳು ದ್ವಿಭಾಷಾವಾದವು ಮೆದುಳಿನ ಕಾರ್ಯಕ್ಷಮತೆಯನ್ನು ಅಭಿವೃದ್ಧಿ ಮಾಡುತ್ತವೆ ಎನ್ನುವುದನ್ನು ಸಾಬೀತು ಮಾಡಿವೆ. ಪಬ್ಮೆಡ್ ಸೆಂಟ್ರಲ್ನಲ್ಲಿ ಪ್ರಕಟವಾದ ವಿಮರ್ಶೆಯ ಪ್ರಕಾರ ದ್ವಿಭಾಷಾ ಅರಿವು ಸೃಜನಶೀಲತೆ, ಕಲಿಕಾ ಆಸಕ್ತಿ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲದೇ ವಯಸ್ಸಾದಂತೆ ಮೆದುಳಿನ ದಕ್ಷತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ವಾದ್ಯ ನುಡಿಸುವುದು ಅಥವಾ ಸಂಗೀತ ಕಲಿಯುವುದು
ಪಿಯಾನೋ ಮತ್ತು ಗಿಟಾರ್ ವಾದಕರು ಅಷ್ಟು ಸಂಕೀರ್ಣ ಮ್ಯೂಸಿಕ್ ನೋಟ್ಗಳನ್ನು ಅಷ್ಟು ಪ್ರಖರವಾಗಿ, ವೇಗವಾಗಿ ಹೇಗೆ ನುಡಿಸುತ್ತಾರೆ ಎಂದು ಒಮ್ಮೆ ಯೋಚಿಸಿ. ಇದಕ್ಕೆ ಪಿಎಲ್ಓಎಸ್ ಒನ್ನಲ್ಲಿ ಪ್ರಕಟವಾದ ಅಧ್ಯಯನವೊಂದು ಈ ಬಗ್ಗೆ ಹೇಳುವುದು ; ಸಂತೋಷದ ಸೃಜನಶೀಲತೆ: ಸುಶ್ರಾವ್ಯವಾದ ಸಂಗೀತವನ್ನು ಆಲಿಸುವುದು ವಿಭಿನ್ನ ಚಿಂತನೆಯನ್ನು ಬೆಳೆಸುತ್ತದೆ. ಸಂಗೀತವು ಮನಸ್ಥಿತಿ, ಸೃಜನಶೀಲತೆ ಮತ್ತು ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ವಾದ್ಯ ಕಲಿಯುವಿಕೆ ಕೌಶಲ್ಯವೃದ್ಧಿ ಜೊತೆಗೆ ಮೆದುಳಿಗೆ ಕಸರತ್ತು ನೀಡಿದ ಅನುಭವ ನೀಡುತ್ತದೆ.
ಧ್ಯಾನ
ಪುರಾತನ ಕಾಲದಿಂದಲೂ ಧ್ಯಾನ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಮನಸ್ಸನ್ನು ಶಾಂತಗೊಳಿಸಿ ದೇಹದ ದಣಿವು ನೀಗಿಸುವ ಧ್ಯಾನ ಜಾಗತಿಕವಾಗಿ ಜೀವನ ಕ್ರಮವೇ ಆಗಿದೆ. ಸಂಶೋಧನೆ ಪ್ರಕಾರ ಮಾಹಿತಿಗಳ ಸಂಸ್ಕರಣಾ ಸಾಮರ್ಥ್ಯ, ಮಾನಸಿಕ ಆರೋಗ್ಯದ ಕ್ಷಮತೆ, ಭಾವನೆಗಳಲ್ಲಿ ಹೊಂದಾಣಿಕೆಯನ್ನು ತರುತ್ತದೆ.
ಸರ್ವ ಇಂದ್ರಿಯಗಳನ್ನು ತನ್ಮಯಗೊಳಿಸಿ
ವಾಸನೆಯೊಂದಕ್ಕೆ ನೆನಪನ್ನು ಮರಳಿಸುವ ಶಕ್ತಿ ಇದೆ. ಇದು ಶಬ್ಧ, ದೃಶ್ಯಕ್ಕೂ ಅನ್ವಯವಾಗುತ್ತದೆ. ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ಪ್ರಕಾರ ಪಂಚೇಂದ್ರಿಯಗಳನ್ನು ಬಳಸಿಕೊಂಡು ವಾಸನೆ, ರುಚಿ, ಸ್ಪರ್ಶ, ಕೇಳುವಿಕೆ ಮತ್ತು ನೋಡುವಿಕೆಯಿಂದ ಮೆದುಳಿನ ದಕ್ಷತೆ ಹೆಚ್ಚಿಸಬಹುದು. ಇದು ಮೆದುಳಿನ ಆರೋಗ್ಯಕ್ಕೆ ಪೂರಕವಾಗಿ ನಿಲ್ಲುತ್ತವೆ.