ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ. ನನ್ನ ಹೆಂಡತಿಗೆ 29 ವರ್ಷ. ನಾವು ಮದುವೆಯಾಗಿ 3 ವರ್ಷಗಳಾಗಿವೆ. ಆದರೆ ನನ್ನ ಪತ್ನಿ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲ. ನಾವು ಸ್ರ್ತೀರೋಗ ತಜ್ಞರನ್ನು ಭೇಟಿ ಮಾಡಿ ಅಗತ್ಯ ಪರೀಕ್ಷೆಗಳನ್ನು ಮಾಡಿದ್ದೇವೆ. ನನ್ನ ಪತ್ನಿ ದೀರ್ಘಕಾಲದ ಮೂತ್ರದ ಸೋಂಕಿನಿಂದ ಬಳಲುತ್ತಿದ್ದಾಳೆ. ನಾನು ಮದುವೆಗೆ ಮುಂಚೆ ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೆ. ಇದಕ್ಕೆ ನಮ್ಮಲ್ಲಿರುವ ಈ ಸಮಸ್ಯೆಗಳೇ ಕಾರಣವಾ?
ಉತ್ತರ : ಹಸ್ತಮೈಥುನವು ಭವಿಷ್ಯದ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಮೂತ್ರ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ನೀಡುವ ಅವಶ್ಯಕತೆಯಿದೆ. ನೀವು ವೀರ್ಯ ಪರೀಕ್ಷೆಯನ್ನು ತಪ್ಪದೇ ಮಾಡಿಸಿ. ಹಾಗೇ ಆಕೆಯ ಋತುಚಕ್ರದ 10,12, 14, ಮತ್ತು 16 ನೇ ದಿನಗಳಲ್ಲಿ ತಪ್ಪದೇ ಸಂಭೋಗ ಮಾಡಿ.