ಬೆಂಗಳೂರು: ನಮ್ಮ ಶರೀರಕ್ಕೆ ಕ್ಯಾಲ್ಶಿಯಂ ತೀರಾ ಅನಿವಾರ್ಯ. ಅದು ಹೇರಳವಾಗಿ ಸಿಗುವುದು ಹಾಲಿನಲ್ಲಿ ಎಂದು ನಾವು ನಂಬಿದ್ದೇವೆ. ಆದರೆ ಹಾಲಿನ ಹೊರತಾಗಿಯೂ ಕ್ಯಾಲ್ಶಿಯಂ ಧಾರಾಳ ಸಿಗುವ ಆಹಾರ ವಸ್ತುಗಳಿವೆ.
ಅದು ಬಾದಾಮಿ ಮತ್ತು ಸೊಪ್ಪು ತರಕಾರಿಗಳು. ಇವೆರಡೂ ನಮ್ಮ ಶರೀರಕ್ಕೆ ಒದಗಿಸುವ ಹಲವು ಪ್ರಮುಖ ಪೋಷಕಾಂಶಗಳ ಪೈಕಿ ಕ್ಯಾಲ್ಶಿಯಂ ಕೂಡಾ ಒಂದು.
ಕಡು ಹಸಿರು ಬಣ್ಣದ ಸೊಪ್ಪು ತರಕಾರಿಗಳನ್ನು ಎರಡು ಕಪ್ ಗಳ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ಶರೀರಕ್ಕೆ 394 ಗ್ರಾಂಗಳಷ್ಟು ಕ್ಯಾಲ್ಶಿಯಂ ಸಿಗುತ್ತದಂತೆ. ಅದೇ ರೀತಿ ಪ್ರತಿ ನಿತ್ಯ ¾ ಕಪ್ ನಷ್ಟು ಬಾದಾಮಿ ಸೇವಿಸಿದರೆ 320 ಗ್ರಾಂಗಳಷ್ಟು ಕ್ಯಾಲ್ಶಿಯಂ ಸಿಗುತ್ತದೆ ಎನ್ನಲಾಗಿದೆ. ಹೀಗಾಗಿ ಇದನ್ನು ಯಾವುದಾದರೂ ರೂಪದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿದರೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ