ನವದೆಹಲಿ: ಭಾರತದ ಮಹಿಳೆಯರು ಆತಂಕ ಪಡುವ ವಿಷಯವೊಂದು ಇತ್ತೀಚೆಗಿನ ಅಧ್ಯಯನ ವರದಿ ಬಹಿರಂಗಪಡಿಸಿದೆ. ಭಾರತೀಯ ಮಹಿಳೆಯರಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂದು ಅದು ಹೇಳಿದೆ.
ಭಾರತದಲ್ಲಿರುವ ಶೇ. 50 ರಷ್ಟು ಮಹಿಳೆಯರು ಹೃದಯಕ್ಕೆ ಹಾನಿ ಮಾಡುವಂತಹ ಕೊಲೆಸ್ಟ್ರಾಲ್ ಸಮಸ್ಯೆಯಂತಹ ಅನಾರೋಗ್ಯಕರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಈ ಅಧ್ಯಯನ ವರದಿ ಹೇಳಿದೆ. ಡಯಾಗ್ನಸ್ಟಿಕ್ ಸಂಸ್ಥೆ ಎಸ್ ಆರ್ ಎಲ್ ಡಯಾಗ್ನಸ್ಟಿಕ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಇದು ತಿಳಿದುಬಂದಿದೆ.
ಉತ್ತರ ಭಾರತದ ಮಹಿಳೆಯರಲ್ಲಿ ಶೇ. 33.11, ಪೂರ್ವ ಭಾಗದ ಮಹಿಳೆಯರಲ್ಲಿ ಶೇ. 35.67, ದ. ಭಾರತದ ಮಹಿಳೆಯರು ಶೇ. 34.15 ಮತ್ತು ಪಶ್ಚಿಮ ಭಾರತದ ಮಹಿಳೆಯರಲ್ಲಿ ಶೇ. 31.90 ರಷ್ಟು ಹೃದಯಾಘಾತಕ್ಕೆ ಕಾರಣವಾಗಬಲ್ಲ ಸಮಸ್ಯೆಗಳಿವೆ ಎಂದು ಅಧ್ಯಯನ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ