Webdunia - Bharat's app for daily news and videos

Install App

ಚಮತ್ಕಾರಿ ಮೂಲಂಗಿ! ಪ್ರಯೋಜನ ತಿಳಿಯಿರಿ

Webdunia
ಮಂಗಳವಾರ, 2 ನವೆಂಬರ್ 2021 (11:50 IST)
ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ತರಕಾರಿಗಳು ತಪ್ಪದೆ ಇರಬೇಕು. ವಾರದಲ್ಲಿ 4-5 ದಿನವಾದರೂ ತರಕಾರಿಗಳ ಸೇವನೆ ಮಾಡಬೇಕು.
ಒಂದೊಂದು ಬಗೆಯ ತರಕಾರಿಗಳಲ್ಲಿ ಒಂದೊಂದು ರೀತಿಯ ಪೋಷಕಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
ಹಲವಾರು ಬಗೆಯ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ತರಕಾರಿಯೆಂದರೆ ಅದು ಮೂಲಂಗಿ.
ತೂಕ ಇಳಿಸಲು ಸಹಕಾರಿ
ಕಡಿಮೆ ಕ್ಯಾಲರಿ ಹೊಂದಿರುವ ಮೂಲಂಗಿ ತೂಕ ಇಳಿಸಲು ಸಹಕಾರಿ. ಆಹಾರದ ನಾರಿನಾಂಶವು ಹೊಟ್ಟೆಯಲ್ಲಿ ತೃಪ್ತಿ ಉಂಟು ಮಾಡುವುದು, ಪದೇ ಪದೇ ತಿನ್ನುವುದನ್ನು ಇದು ಕಡಿಮೆ ಮಾಡುವುದು.
ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗುವ ಅತಿಯಾದ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಜೀರ್ಣಕ್ರಿಯೆ ಸುಧಾರಣೆ ಮಾಡಿ, ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳುವಂತೆ ಮಾಡುವ ಮೂಲಂಗಿಯು ಅತಿಯಾಗಿ ತಿನ್ನುವುದನ್ನು ತಡೆಯುವುದು.
ಸಕ್ಕರೆ ಮಟ್ಟ ನಿರ್ವಹಣೆ
ಮಧುಮೇಹಿಗಳು ಮತ್ತು ಮಧುಮೇಹದ ಅಪಾಯವಿರುವವರಿಗೆ ಮೂಲಂಗಿಯು ತುಂಬಾ ಪರಿಣಾಮಕಾರಿಯಾಗಿದೆ. ಯಾಕೆಂದರೆ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ.
ಇದರಿಂದ ಮಧುಮೇಹ ನಿರ್ವಹಿಸಲು ಸಹಕಾರಿ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ರಕ್ತನಾಳಗಳು ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುವುದು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಮೂಲಂಗಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ.
ಪ್ರತಿರೋಧಕ ಶಕ್ತಿ ವೃದ್ಧಿ
ಮೂಲಂಗಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಮತ್ತು ಇತರ ಆಂಟಿಆಕ್ಸಿಡೆಂಟ್ ಗಳು ಇವೆ. ಇದು ಪ್ರತಿರೋಧಕ ಅಂಗಾಂಶಗಳು ಮತ್ತು ಬಿಳಿ ರಕ್ತ ಕಣಗಳನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಣೆ ಮಾಡುವುದು ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿಸುವುದು.
ರಕ್ತಹೀನತೆ ತಡೆಯುವುದು
ಕಬ್ಬಿಣಾಂಶದ ಕೊರತೆಯಿಂದ ಕಾಡಿರುವಂತಹ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುವಲ್ಲಿ ಮೂಲಂಗಿಯು ಪರಿಣಾಮಕಾರಿ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬಂದರೆ ಅದರಿಂದ ರಕ್ತಹೀನತೆಯು ಕಾಡುವುದು.
ಇದರಿಂದ ಬಳಲಿಕೆ, ನಿಶ್ಯಕ್ತಿ, ಪೇಲವ ಚರ್ಮ, ಅಸಾಮಾನ್ಯ ಎದೆಬಡಿತ, ಉಸಿರಾಟದ ತೊಂದರೆ, ಎದೆನೋವು, ಕಾಲು ಮತ್ತು ಕೈಗಳನ್ನು ತಣ್ಣಗಾಗುವುದು ಇತ್ಯಾದಿಗಳು ಕಾಣಿಸಿಕೊಳ್ಳುವುದು. ಕಬ್ಬಿಣಾಂಶವು ಕೆಂಪು ರಕ್ತದ ಕಣಗಳನ್ನು ವೃದ್ಧಿಸುವುದು. ಇದರಿಂದ ರಕ್ತಹೀನತೆ ಕಡಿಮೆ ಆಗುವುದು.
ಮೂಳೆಗಳನ್ನು ಬಲಪಡಿಸುವುದು
ಮೂಲಂಗಿಯಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನಿಶಿಯಂ ಇರುವ ಕಾರಣದಿಂದಾಗಿ ಇದು ಮೂಳೆಗಳನ್ನು ಬಲಪಡಿಸಲು ಸಹಕಾರಿ. ಮೂಳೆಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಕ್ಯಾಲ್ಸಿಯಂ ಅತೀ ಅಗತ್ಯ. ಕ್ಯಾಲ್ಸಿಯಂ ಕೊರತೆಯಿಂದ ಅಸ್ಥಿರಂಧ್ರತೆ ಸಮಸ್ಯೆಯು ಬರಬಹುದು.
ಮೂಲಂಗಿಯಲ್ಲಿ ಇರುವ ಮೆಗ್ನಿಶಿಯಂ ಕ್ಯಾಲ್ಸಿಯಂ ಹೀರುವಿಕೆಯನ್ನು ಉತ್ತಮಪಡಿಸುವುದು ಮತ್ತು ಇದರಿಂದ ಬೆನ್ನುಹುರಿ ಸಹಿತ ಮೂಳೆಗಳ ಲವಣಾಂಶವು ಸುಧಾರಣೆ ಆಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments