ಬೆಂಗಳೂರು: ತುಂಬಾ ಸಮಯದಿಂದ ಗರ್ಭನಿರೋಧಕ ಮಾತ್ರೆ ಬಳಸುತ್ತಿದ್ದರೆ ಮತ್ತೆ ಗರ್ಭಿಣಿಯಾಗಲು ತೊಂದರೆಯಾಗುತ್ತದೆಯೇ ಎಂಬ ಆತಂಕ ಹಲವರಿಗಿರುತ್ತದೆ.
ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಮೇಲೆ ಗರ್ಭಿಣಿಯಾಗುವುದಕ್ಕೆ ಏನೂ ತೊಂದರೆಯಿಲ್ಲ. ಒಂದು ವೇಳೆ ನಂತರವೂ ಗರ್ಭಧಾರಣೆಯಾಗದೇ ಇದ್ದರೆ ಅದಕ್ಕೆ ಬೇರೆಯದೇ ಕಾರಣಗಳಿರಬಹುದು. ಸೂಕ್ತ ತಜ್ಞ ವೈದ್ಯರ ಸಲಹೆ ಪಡೆದು ನಿಮಗೆ ಸೂಕ್ತವೆನಿಸುವ ಮಾತ್ರೆ ತೆಗೆದುಕೊಂಡಿದ್ದರೆ ಇಂತಹ ಸಮಸ್ಯೆ ಬರದು. ಒಂದು ವೇಳೆ ಬಂದರೆ ಅದಕ್ಕೆ ತಜ್ಞರ ನೆರವು ಪಡೆದು ನಿಜವಾದ ಕಾರಣ ತಿಳಿಯಬಹುದು.