ಬೆಂಗಳೂರು : ಹೌದು. ಹೆತ್ತವರ ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಇಂತವರ ಮಕ್ಕಳು ಸಕಾರಾತ್ಮಕ ಯೋಚನೆ ಮಾಡುವುದನ್ನೇ ಕೈಬಿಡುತ್ತಾರೆ.
ಇದಕ್ಕೆ ಮುಖ್ಯ ಕಾರಣ, ಇಂತಹ ವಿವಾಹೇತರ ಸಂಬಂಧ ಹೊಂದಿರುವ ಅಥವಾ ಅತಿ ಕಾಮುಕ ತಂದೆ-ತಾಯಿ, ಮಕ್ಕಳ ಬಗ್ಗೆ ಯೋಚಿಸುವುದನ್ನು ಬಿಟ್ಟು ತಮ್ಮ ಸುಖ ಆಕಾಂಕ್ಷೆಗಳ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.
ದಿನದ ಬಹುತೇಕ ಕಾಲ ಮುಚ್ಚಿದ ಬಾಗಿಲ ಕೋಣೆಯಲ್ಲಿ ಹೆತ್ತವರು ಕಳೆದರೆ ಮಕ್ಕಳಲ್ಲಿ ಸಹಜವಾಗಿಯೇ ಉದ್ವೇಗ ಮತ್ತು ಅತಂತ್ರ ಸ್ಥಿತಿಯ ಮನೋಭಾವ ನಿರ್ಮಾಣವಾಗುತ್ತದೆ. ಇದು ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂತಹ ಸನ್ನಿವೇಶ ಎದುರಿಸುವ ಮಕ್ಕಳು ತಮ್ಮ ಬೇರೆ ಹವ್ಯಾಸಗಳ ಮೂಲಕ ಅದನ್ನು ತೋರ್ಪಡಿಸುತ್ತಾರೆ. ಬೆರಳು ಚೀಪುವುದು, ರಾತ್ರಿ ಭಯ ಪಡುವುದು, ದೇಹದ ಆಕಾರ ತೋರಿಸುವಂತೆ ಬಿಗಿಯಾದ ಬಟ್ಟೆ ಧರಿಸುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ, ವಿನಾಕಾರಣ ಸಿಟ್ಟಿಗೇಳುವುದು ಮೊದಲಾದ ಅಭ್ಯಾಸಗಳು ಮಕ್ಕಳಲ್ಲಿ ಬೆಳೆಯುತ್ತದೆ.
ಇಂತಹ ಹೆತ್ತವರ ಮಧ್ಯೆ ಬೆಳೆಯುವ ಮಗು ದೊಡ್ಡದಾದ ಬಳಿಕ ಒಂದೇ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳದೆ ಪರಸ್ತ್ರೀ ಜೊತೆ ಸಂಬಂಧ ಹೊಂದುವುದು ಸಹಜವಾಗಿರುತ್ತದೆ. ವಿಚ್ಛೇದನ ಮತ್ತು ಭಾವನಾತ್ಮಕ ಸಮಸ್ಯೆಗಳು ಇವರಲ್ಲಿ ಸಾಮಾನ್ಯವಾಗಿರುತ್ತವೆ. ಇನ್ನು ಶಾಲೆಯಲ್ಲಿ ಕಲಿಕೆಯಲ್ಲೂ ಹಿಂದುಳಿಯುವುದು ಮಾತ್ರವಲ್ಲ ಮಾನಸಿಕ ಮತ್ತು ನಡವಳಿಕೆ ಸಮಸ್ಯೆಯಿಂದ ಬಳಲುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ