Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಕ್ಷಣ ಬೆಳ್ಳಗೆ ಕಾಣಲು ಮನೆಯಲ್ಲೆ ಹೀಗೆ ಫೇಶಿಯಲ್ ಮಾಡಿ

ತಕ್ಷಣ ಬೆಳ್ಳಗೆ ಕಾಣಲು ಮನೆಯಲ್ಲೆ ಹೀಗೆ ಫೇಶಿಯಲ್ ಮಾಡಿ
ಬೆಂಗಳೂರು , ಭಾನುವಾರ, 18 ಆಗಸ್ಟ್ 2019 (09:45 IST)
ಬೆಂಗಳೂರು : ಯಾವುದೇ ಸಭೆ ಸಮಾರಂಭಗಳಿಗೆ ಹೋಗುವಾಗ ತುಂಬಾ ಚೆನ್ನಾಗಿ ಕಾಣಬೇಕು ಎಂದು ಹಲವರು ಬಯಸುತ್ತಾರೆ. ಅದಕ್ಕಾಗಿ ಫಕ್ಷನ್ ಗೆ ಹೋಗುವ ಮೊದಲು ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಲು ಹಣ ಖರ್ಚುಮಾಡುತ್ತಾರೆ. ಅದರ ಬದಲು ಮನೆಯಲ್ಲಿ ಸಿಗುವ ವಸ್ತುಗಳಿಂದಲ್ಲೇ ಈ ರೀತಿಯಾಗಿ ಫೇಶಿಯಲ್ ಮಾಡಿ.



 ಟೊಮೆಟೊ ಪೇಸ್ಟ್ 1 ಡೇಬಲ್ ಚಮಚದಷ್ಟು ತೆಗೆದುಕೊಂಡು, ಅದಕ್ಕೆ 1ಚಮಚ ಹಸಿ ಹಾಲು ಹಾಕಿ ಮಿಕ್ಸ್ ಮಾಡಿ ಹತ್ತಿಯ ಸಹಾಯದಿಂದ  ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿ.

 

ನಂತರ 1 ಚಮಚ ಸಕ್ಕರೆ, 1 ಟೇಬಲ್ ಚಮಚ ಟೊಮೆಟೊ ಪೇಸ್ಟ್ , ½ ಜೇನುತುಪ್ಪ ಹಾಕಿ  ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿ ನಂತರ ಬ್ರೆಶ್ ಸಹಾಯದಿಂದ ಮುಖಕ್ಕೆ ಹಚ್ಚಿ 10ನಿಮಿಷ ಅದು ಒಣಗಿದ ಮೇಲೆ ಟೊಮೆಟೊ ಮೇಲೆ ಸ್ವಲ್ಪ ಸಕ್ಕರೆ ಹಾಕಿ ಮುಖದ ಮೇಲೆ 5 ನಿಮಿಷ ಸ್ಕ್ರಬ್ ಮಾಡಬೇಕು. ಮುಖವನ್ನು ತಣ್ಣೀರಿನಲ್ಲಿ ವಾಶ್ ಮಾಡಿ.

 

ನಂತರ 1ಬೌಲ್ ನಲ್ಲಿ 1 ಟೇಬಲ್ ಚಮಚ ಕಡಲೆ ಹಿಟ್ಟು, 1 ಚಿಟಿಕೆ ಅರಶಿನ, 1 ಚಮಚ ಮೊಸರು, 1ಟೇಬಲ್ ಚಮಚ ಟೊಮೆಟೊ ಪೇಸ್ಟ್, 1 ಚಮಚ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಮುಖಕ್ಕೆ ಮಸಾಜ್ ಮಾಡಿ. ನಂತರ ವಾಶ್ ಮಾಡಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬನೊಂದಿಗೆ ಲವ್ವಿ ಡವ್ವಿ ಮತ್ತೊಬ್ಬನೊಂದಿಗೆ ಮದುವೆ : ಆ ಮಗು ಯಾರಿಗೆ ಹುಟ್ಟಿದ್ದು?