ಬೆಂಗಳೂರು : ಮಹಿಳೆಯರಿಗೆ ಸಾಮಾನ್ಯವಾಗಿ ಇರುವ ದೋಷವೆಂದರೆ ಅದು ಕುಜ ದೋಷ ಮತ್ತು ಚಂದ್ರದೋಷ. ಈ ದೋಷ ನಿವಾರಣೆಯಾಗಬೇಕಾದರೆ ವರಮಹಾಲಕ್ಷ್ಮೀ ವೃತದ ದಿನ ತಾಂಬೂಲದ ಜೊತೆ ಇದನ್ನು ನೀಡಿ.
ಶ್ರಾವಣ ಮಾಸದ ಪೌರ್ಣಮಿಯ ದಿನ ಮೊದಲು ಬರುವ ಶುಕ್ರವಾರದಂದು ಬರುವ ವೃತವೇ ವರಮಹಾಲಕ್ಷ್ಮೀ ವೃತ. ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರಲಿ, ಆಕೆಯ ಕೃಪೆ ತಮ್ಮ ಮೇಲೆ ಇರಲಿ ಎಂದು ಈ ಮುತ್ತೈದೆಯರು ಈ ವೃತವನ್ನು ಮಾಡುತ್ತಾರೆ. ಆ ವೇಳೆ ಮನೆಗೆ ಮುತ್ತೈದೆಯರನ್ನು ಕರೆದು ತಾಂಬೂಲ ನೀಡುತ್ತಾರೆ. ಹೀಗೆ ಕೊಡುವ ತಾಂಬೂಲದಲ್ಲಿ ಅರಶಿನ, ಕುಂಕುಮ, ಹೂವುಹಣ್ಣು, ಎಲೆ ಅಡಿಕೆ ಹಾಗೂ ಇದರ ಜೊತೆಗೆ ನೆನೆಸಿದ ಕಡಲೆಕಾಳನ್ನು ತಪ್ಪದೇ ನೀಡಬೇಕು.
ತಾಂಬೂಲದಲ್ಲಿ ಎಲೆಅಡಿಕೆ ಮತ್ತು ಕಡಲೆಕಾಳನ್ನು ಕೊಡುವುದರಿಂದ ಮಹಿಳೆಯರ ಜಾತಕದಲ್ಲಿರುವ ಕುಜ ದೋಷ ಮತ್ತು ಚಂದ್ರದೋಷ. ನಿವಾರಣೆಯಾಗುತ್ತದೆ. ಹಾಗೇ ನೆನೆಸಿದ ಕಡಲೆಕಾಳನ್ನು ತಾಂಬೂಲದ ಜೊತೆ ಕೊಡುವುದರಿಂದ ಗುರುಗ್ರಹ ಕೂಡ ಬಲವಾಗುತ್ತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.