Webdunia - Bharat's app for daily news and videos

Install App

ಕೆಂಪು ಬಾಳೆಹಣ್ಣಿನಿಂದ ಆರೋಗ್ಯದ ಗುಟ್ಟು ತಿಳಿಯಿರಿ!

Webdunia
ಶುಕ್ರವಾರ, 17 ಡಿಸೆಂಬರ್ 2021 (11:51 IST)
ಆರೋಗ್ಯವನ್ನು ಕಾಪಾಡುವ ಬಾಳೆಹಣ್ಣು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಊಟದ ಕೊನೆಯಲ್ಲಿ ಒಂದು ಬಾಳೆಹಣ್ಣು ತಿಂದರೆ ತೃಪ್ತಿಯಾಗುತ್ತೆ.

ದೇಹ ಹಗರುವಾಗುವ ಜೊತೆಗೆ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಬಾಳೆಹಣ್ಣು ಖನಿಜಾಂಶ, ವಿಟಮಿನ್, ಫೈಬರ್ ಅಂಶಗಳನ್ನು ಹೊಂದಿದೆ. ವಿಶ್ವದಾದ್ಯಂತ 15 ರಿಂದ 16 ತರಹದ ಬಾಳೆಹಣ್ಣುಗಳು ಇವೆ. ಈ ಪೈಕಿ ಕೆಂಪು ಬಾಳೆಹಣ್ಣು ಕೂಡಾ ಒಂದು.

ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಕೆಲ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.
ತೂಕ
ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ತೂಕ ಇಳಿಸುವವರು ಅನ್ನದ ಬದಲು ಒಂದು ಕೆಂಪು ಬಾಳೆಹಣ್ಣನ್ನು ತಿನ್ನಬಹುದು.
ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಂಪು ಬಾಳೆಹಣ್ಣು ಸೇವಿಸುವುದು ಅನಿವಾರ್ಯ. ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಈ ವಿಧಾನಕ್ಕೆ ಕೆಂಪು ಬಾಳೆಹಣ್ಣು ಸೇವಿಸುವುದನ್ನು ಸೇರಿಸಿ.
ಮುಖದ ಕಾಂತಿ

ಕೆಂಪು ಬಾಳೆಹಣ್ಣಿನಿಂದ ಮುಖದ ಕಾಂತಿಯನ್ನೂ ಹೆಚ್ಚಿಸಬಹುದು. ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಮೂರ್ನಾಲ್ಕು ಜೇನುತುಪ್ಪ ಹನಿಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಮೂಲಕ ಮುಖದ ಕಾಂತಿ ಹೆಚ್ಚಾಗುತ್ತದೆ.
ಕೂದಲು ಉದುರುವಿಕೆ

ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments