ನವದೆಹಲಿ: ನಿಯಮಿತವಾಗಿ ಸೆಕ್ಸ್ ಮಾಡದೇ ಇದ್ದರೆ ನಿಮ್ಮ ಉದ್ಯೋಗಕ್ಕೆ ಕುತ್ತು ಗ್ಯಾರಂಟಿ! ಹೀಗಂತ ನೈಜೀರಿಯಾದ ಲೈಂಗಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಲೈಂಗಿಕ ತಜ್ಞ ಡಾ. ಟಾಮಿ ಎಂಬವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಅಧ್ಯಯನ ವರದಿಗಳ ಆಧಾರದಲ್ಲಿ ಅವರು ಈ ರೀತಿ ಹೇಳಿದ್ದಾರೆ. ಸೆಕ್ಸ್ ನಿಯಮಿತವಾಗಿ ಮಾಡುವುದಕ್ಕೂ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಸಂಬಂಧವಿದೆ.
ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ನಮ್ಮ ಕೆಲಸದ ಗುಣಮಟ್ಟ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಸಹಜವಾಗಿಯೇ ನೀವು ಬಾಸ್ ನ ಮೆಚ್ಚುಗೆಗೆ ಪಾತ್ರರಾಗುತ್ತೀರಿ ಎಂಬುದು ಡಾ. ಟಾಮಿ ಅವರ ವಿಶ್ಲೇಷಣೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.