Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಯು ಮಾಲಿನ್ಯದಿಂದ ಕಾಪಾಡಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

ವಾಯು ಮಾಲಿನ್ಯದಿಂದ ಕಾಪಾಡಿಕೊಳ್ಳಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಶುಕ್ರವಾರ, 2 ನವೆಂಬರ್ 2018 (09:21 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಗರವಾಸಿಗಳಿಗೆ ವಾಯು ಮಾಲಿನ್ಯದ್ದೇ ಸಮಸ್ಯೆ. ಇದರಿಂದಾಗಿ ಆರೋಗ್ಯ ಹದಗೆಡುವುದು ಸಾಮಾನ್ಯ. ಕೆಲವು ಆಹಾರ ವಸ್ತುಗಳು ಇದನ್ನು ಕಡಿಮೆ ಮಾಡಬಹುದು.

ಟೊಮೆಟೊ
ಟೊಮೆಟೊದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದು ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶದ ಆರೋಗ್ಯವನ್ನು 10 ವರ್ಷದಷ್ಟು ಹೆಚ್ಚು ಕಾಪಾಡುತ್ತದೆ.

ಪಾಲಕ್ ಸೊಪ್ಪು
ಪಾಲಕ್, ಬಸಳೆ ಸೊಪ್ಪು ಮುಂತಾದ ಸೊಪ್ಪು ತರಕಾರಿಗಳಲ್ಲಿರುವ ಪೋಷಕಾಂಶಗಳು ರೋಗಗಳನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆಗಳಿಂದ ಹಿಡಿದು, ಉಸಿರಾಟ ಸಂಬಂಧೀ ಸಮಸ್ಯೆಗಳನ್ನೂ ದೂರ ಮಾಡುತ್ತದೆ.

ಆಪಲ್
ಆಪಲ್ ನಲ್ಲಿರುವ ಪೋಷಕಾಂಶಗಳು ಉಸಿರಾಟ, ಅಸ್ತಮಾ, ಶ್ವಾಸಕೋಶ ಸಂಬಂಧೀ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ತೆಳ್ಳಗಾಗಿದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ