ಬೆಂಗಳೂರು: ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ ಚಿಂತೆ. ಹಾಗಿದ್ದರೆ ಚಿಂತೆ ಮಾಡಬೇಡಿ. ಜ್ಞಾಪಕ ಶಕ್ತಿ, ಏಕಾಗ್ರತೆ ಹೆಚ್ಚು ಮಾಡಲು ಹೊಸ ಉಪಾಯವೊಂದನ್ನು ಕಂಡುಕೊಳ್ಳಲಾಗಿದೆ.
ಹೊಸ ಸಂಶೋಧಕರ ಪ್ರಕಾರ ಓದುವಾಗ, ಬರೆಯುವಾಗ ಮಕ್ಕಳು ಏಕಾಗ್ರತೆ ಕೊಡುತ್ತಿಲ್ಲ ಎಂದಾದರೆ 15 ನಿಮಿಷ ಬ್ರೇಕ್ ಕೊಡಿ, ಇಲ್ಲವೇ ಓಡುವುದು ಅಥವಾ ಆಡಲು ಸಣ್ಣ ಬ್ರೇಕ್ ಕೊಡಬೇಕು. ಇದರಿಂದ ಮಕ್ಕಳ ಮೂಡ್ ಕೂಡಾ ಚೆನ್ನಾಗಿ ಆಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಲಂಡನ್ ಮೂಲದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ಸಮೀಕ್ಷೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಈ ಮಕ್ಕಳಿಗೆ ತಮ್ಮ ಮೂಡ್ ಬದಲಾಯಿಸಲು ಸಣ್ಣ ದೈಹಿಕ ಕಸರತ್ತು ನೀಡಿ ಪರೀಕ್ಷಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ