ಬೆಂಗಳೂರು : ಮನುಷ್ಯ ದೇಹದಲ್ಲಿ ಬಹು ಮುಖ್ಯವಾದ ಭಾಗಗಳಲ್ಲಿ ಲಿವರ್ ಕೂಡ ಒಂದು. ಈ ಲಿವರ್ ಶುದ್ಧವಾಗಿದ್ದರೆ ಮನಷ್ಯ ಕೂಡ ಆರೋಗ್ಯವಾಗಿರುತ್ತಾನೆ. ಆದರೆ ಮದ್ಯಪಾನ ಮಾಡುವುದರಿಂದ ಲಿವರ್ ಹಾಳಾಗುತ್ತದೆ. ಇದರಿಂದ ಮನುಷ್ಯನಿಗೆ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಈ ಲಿವರ್ ನ್ನು ನೈಸರ್ಗಿಕವಾಗಿ ಮನೆಯಲ್ಲೇ ಹೇಗೆ ಶುದ್ಧಿಕರೀಸುವುದು ಎಂಬುದನ್ನು ತಿಳಿಯೋಣ.
ಕಡಲೆಕಾಳು 50ಗ್ರಾಂ ತೆಗೆದುಕೊಂಡು ಅದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ನೀರು ಹಾಕಿ ಇದಕ್ಕೆ 3 ಗ್ರಾಂನಷ್ಟು ಸೈಂದವ ಲವಣ ಅಥವಾ ಕಲ್ಲುಪ್ಪು ಹಾಕಿ ಬೇಯಿಸಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಹೀಗೆ 15 ದಿನ ಮಾಡಿ.
ಆಮೇಲೆ 16 ನೇ ದಿನದಿಂದ 30 ದಿನದ ತನಕ ಕಡಲೆಕಾಳನ್ನು ಹುರಿದುಕೊಂಡು ಇದಕ್ಕೆ 3 ಗ್ರಾಂನಷ್ಟು ಸೈಂದವ ಲವಣ ಅಥವಾ ಕಲ್ಲುಪ್ಪು ಹಾಕಿ ಮಿಕ್ಸ್ ಮಾಡಿ ತಿನ್ನಬೇಕು. ಹೀಗೆ ಮಾಡಿದ್ರೆ ಲಿವರ್ ಕ್ಲೀನ್ ಆಗುತ್ತೆ. ಅದರ ಜೊತೆಗೆ ಖಾರ ತಿನ್ನಬಾರದು ಹಾಗೇ ಮದ್ಯಪಾನ , ಧೂಮಪಾನ, ತಂಬಾಕು ಯಾವುದನ್ನು ಸೇವಿಸಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ