ಬೆಂಗಳೂರು : ಹಣ್ಣುಗಳನ್ನು ತೆಗೆದುಕೊಂಡ ಮೇಲೆ ಮಾತ್ರೆಗಳನ್ನು ಸೇವಿಸಬಾರದು. ಆರೋಗ್ಯಕ್ಕಾಗಿ ಮಾತ್ರೆಗಳನ್ನು ನಿತ್ಯವೂ ತೆಗೆದುಕೊಳ್ಳುವುದು ಕೆಲವರಿಗೆ ಅನಿವಾರ್ಯವಾಗಿರುತ್ತದೆ. ಅಂತಹ ಮಾತ್ರೆಗಳನ್ನು ನಿತ್ಯವೂ ನೀರಿನ ಬದಲು ಹಣ್ಣಿನ ರಸದ ಜೊತೆ ತೆಗೆದುಕೊಳ್ಳಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅಂತಹವರಿಗೆ ಒಂದಿಷ್ಟು ಎಚ್ಚರಿಕೆಯ ಟಿಪ್ಸ್ ಇಲ್ಲಿದೆ.
ಕೆಲವೊಂದು ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಈ ಅಭಾಸ್ಯದಿಂದ ಕೆಲವು ವ್ಯತಿರಿಕ್ತ ಪರಿಣಾಮಗಳನ್ನು ಸಹ ಉಂಟಾಗುತ್ತವೆ. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ಹಲವಾರು ಹಣ್ಣಿನ ರಸಗಳ ಪರಿಣಾಮವನ್ನು ಅಭ್ಯಾಸ ಮಾಡಿದ್ದು, ಆ ಮೂಲಕ ಹಣ್ಣುಗಳ ರಸದ ಜೊತೆಗೆ ಮಾತ್ರೆಗಳನ್ನು ಸೇವಿಸುವುದರಿಂದ ಮಾರಕ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಏಕೆಂದರೆ ಈ ಹಣ್ಣುಗಳ ರಸಗಳೇ ನಮ್ಮ ಜೀರ್ಣಾಂಗಗಳಲ್ಲಿ ಕರಗಿದ ಬಳಿಕ ಔಷಧಿಯ ಕೆಲಸ ಮಾಡುತ್ತಿದ್ದು, ಮಾತ್ರೆಯಲ್ಲಿನ ರಾಸಾಯನಿಕಗಳು ಇದರೊಂದಿಗೆ ಸೇರಿದಾಗ ಎರಡು ದ್ರವಗಳು ಸಂಯೋಜನೆಗೊಂಡು ಬೇರೆಯ ರಾಸಾಯನಿಕವಾಗಿ ಪರಿಣಮಿಸಿ ಅಗತ್ಯವಾದ ಪರಿಣಾಮವನ್ನು ಒದಗಿಸುವ ಬದಲು ಬೇರೆಯೇ ಪರಿಣಾಮವನ್ನು ಒದಗಿಸಿಬಿಡಬಹುದು. ಆದ್ದರಿಂದ ಮಾತ್ರೆಗಳನ್ನು ನಿತ್ಯವೂ ಹಣ್ಣಿನ ರಸದ ಬದಲು ನೀರಿನ ಜೊತೆ ತೆಗೆದುಕೊಂಡರೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ