Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

‘ಲವ್‌ರಾತ್ರಿ' ಚಿತ್ರ ಬಿಡುಗಡೆಯಾಗಬಾರದೆಂದು ಹಿಂದು ಜನಜಾಗೃತಿ ಸಮಿತಿ ಪ್ರತಿಭಟಿಸಲು ಕಾರಣವೇನು ?

‘ಲವ್‌ರಾತ್ರಿ' ಚಿತ್ರ ಬಿಡುಗಡೆಯಾಗಬಾರದೆಂದು  ಹಿಂದು ಜನಜಾಗೃತಿ ಸಮಿತಿ ಪ್ರತಿಭಟಿಸಲು ಕಾರಣವೇನು ?
ಮುಂಬೈ , ಭಾನುವಾರ, 12 ಆಗಸ್ಟ್ 2018 (07:00 IST)
ಬೆಂಗಳೂರು : ಈ ಹಿಂದೆ ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' ಚಿತ್ರದ ವಿರುದ್ಧ ದೇಶಾದ್ಯಾಂತ ಉಗ್ರ ಪ್ರತಿಭಟನೆಗಳು ನಡೆದಿತ್ತು. ಅದೇರೀತಿ ಇದೀಗ ಬಾಲಿವುಡ್ ನ ಮತ್ತೊಂದು ಸಿನಿಮಾದ ವಿರುದ್ಧ ಪ್ರತಿಭಟನೆ, ವ್ಯಕ್ತವಾಗುತ್ತಿದೆ.


ಹೌದು. ಸಲ್ಮಾನ್ ಖಾನ್ ಅಭಿನಯದ ಚಿತ್ರ 'ಲವ್‌ರಾತ್ರಿ' ಸಿನಿಮಾಕ್ಕೆ ನಿಷೇಧ ಹೇರಬೇಕೆಂದು ಈ ಹಿಂದೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಆಗ್ರಹಿಸಿದ್ದರು. ಇದೀಗ ಈ ಸಿನಿಮಾವನ್ನ ಬಿಡುಗಡೆ ಮಾಡಬಾರದು, ಅದನ್ನ ನಿಷೇಧ ಮಾಡಬೇಕೆಂದು ಒತ್ತಾಯಿಸಿ ಹಿಂದುತ್ವವಾದಿ,ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.


ದುರ್ಗಾದೇವಿಯ ಒಂಭತ್ತು ಅವತಾರಗಳನ್ನು ಒಂಭತ್ತು ದಿನ ಪೂಜಿಸುವ ಹಿಂದೂಗಳ ಪವಿತ್ರ ಹಬ್ಬವೇ ನವರಾತ್ರಿ. ಈ ಹಬ್ಬದ ಹೆಸರನ್ನು ಚಿತ್ರಕ್ಕೆ ದುರುಪಯೋಗಪಡಿಸಿಕೊಂಡು 'ಲವ್‌ರಾತ್ರಿ' ಯೆಂದು ಟೈಟಲ್ ಇಡಲಾಗಿದೆ. ಇದು ಹಿಂದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಸನಾತನ ಧರ್ಮವಾದ ನಮ್ಮ ಹಿಂದು ಧರ್ಮದಲ್ಲಿ ಪೂಜೆ-ಪುನಸ್ಕಾರಗಳು ನಿತ್ಯ ನಡೆಯುತ್ತವೆ. ಆದ್ರೆ 'ಲವ್ ರಾತ್ರಿ' ಎಂಬ ಸಿನಿಮಾ ಇದಕ್ಕೆ ತದ್ವಿರುದ್ಧ ಎಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಗಾಂಧೀಜಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದ್ದಾರೆ.


'ಲವ್‌ರಾತ್ರಿ' ಚಿತ್ರ ಇದೇ ವರ್ಷ ಅಕ್ಟೋಬರ್ 5ರಂದು, ನವರಾತ್ರಿ ಹಬ್ಬದಂದೇ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಸಿರ್ಧರಿಸಿದೆ. ಆದರೆ  ಬಿಡುಗಡೆಗೂ ಮುನ್ನವೇ ಈ ಸಿನಿಮಾ ಇಷ್ಟು ವಿವಾದಕ್ಕೆ ಕಾರಣವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಂಗನಾ ಧರಿಸಿದ್ದ Gucci ನೆಕ್ಲೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ