Webdunia - Bharat's app for daily news and videos

Install App

ಹಾಲಿನ ಜೊತೆ ಈ ಆಹಾರಗಳನ್ನು ಸೇವಿಸಿದರೆ ಆಪತ್ತು ಖಂಡಿತ

Webdunia
ಭಾನುವಾರ, 29 ಜುಲೈ 2018 (06:49 IST)
ಬೆಂಗಳೂರು : ನಾವು ದಿನನಿತ್ಯ ಬಳಸುವ ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ಆಹಾರವಾಗಿದೆ. ಆದರೆ ಇದನ್ನು ಕೆಲವೊಂದು ಆಹಾರಗಳ ಜೊತೆಗೆ ಸೇವನೆ ಮಾಡಿದರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆ ಆಹಾರಗಳು ಎಂಬುದು ಇಲ್ಲಿದೆ ನೋಡಿ


ಉದ್ದಿನ ಬೇಳೆ : ಉದ್ದಿನ ಬೇಳೆಯಿಂದ ಮಾಡಿದ ಆಹಾರ ಮತ್ತು ಹಾಲು ಎರಡು ಸಹ ಜೀರ್ಣವಾಗಲು ತುಂಬಾ ಸಮಯವಾಗುತ್ತದೆ. ಇದನ್ನು ಜೊತೆಯಾಗಿ ಸೇವನೆ ಮಾಡಿದರೆ ಅಜೀರ್ಣ ಮತ್ತು ಗ್ಯಾಸ್‌ ಸಮಸ್ಯೆ ಉಂಟಾಗುತ್ತದೆ.
ಉಪ್ಪಿರುವ ಆಹಾರ : ಹಾಲಿನ ಜೊತೆ ಚಿಪ್ಸ್‌, ಮಿಕ್ಷರ್‌, ಲೇಸ್‌ ಮೊದಲಾದ ಆಹಾರ ಸೇವನೆ ಮಾಡಬೇಡಿ. ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಕಾರಣ ಹಾಲಿನ ಪ್ರೊಟೀನ್‌ ನಿಮ್ಮ ದೇಹಕ್ಕೆ ಸೇರುವುದಿಲ್ಲ. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.


ಈರುಳ್ಳಿ : ಆಹಾರದಲ್ಲಿ ಈರುಳ್ಳಿ ಇದ್ದರೆ ಅದರ ಜೊತೆಗೆ ಅಥವಾ ನಂತರ ಹಾಲು ಸೇವನೆ ಮಾಡುವುದನ್ನು ಅವಾಯ್ಡ್‌ ಮಾಡಿ. ಇದನ್ನು ಸೇವನೆ ಮಾಡಿದರೆ ತುರಿಕೆ, ಇನ್‌ಫೆಕ್ಷನ್‌, ಮೊದಲಾದ ಸ್ಕಿನ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೆಣಸು : ಮೆಣಸು ಅಥವಾ ಮಸಾಲೆ ಪದಾರ್ಥದ ಜೊತೆಗೂ ಹಾಲು ಸೇವನೆ ಮಾಡಬೇಡಿ. ಯಾಕೆಂದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನೋವು, ಆಸಿಡಿಟಿ, ಗ್ಯಾಸ್‌, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೀನು : ಮೀನು ತುಂಬಾ ಉಷ್ಣವುಳ್ಳ ಆಹಾರವಾಗಿದೆ.ಮೀನಿನ ಜೊತೆ ಹಾಲು ಸೇವನೆ ಮಾಡಿದರೆ ಗ್ಯಾಸ್‌, ಎಲರ್ಜಿ ಜೊತೆಗೆ ಸ್ಕಿನ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೊಸರು : ಹಾಲು ಮತ್ತು ಮೊಸರಿನ ಉತ್ಪನ್ನಗಳನ್ನು ಜೊತೆಯಾಗಿ ಸೇವನೆ ಮಾಡಬಾರದು.ಇದನ್ನು ಜೊತೆಯಾಗಿ ತಿಂದರೆ ಆಸಿಡಿಟಿ, ಗ್ಯಾಸ್‌, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಬಾಳೆಹಣ್ಣು : ನಿಮಗೆ ಶೀತ, ಕೆಮ್ಮು, ನೆಗಡಿ ಮೊದಲಾದ ಸಮಸ್ಯೆ ಇದ್ದರೆ ಹಾಲಿನ ಜೊತೆಗೆ ಬಾಳೆಹಣ್ಣು ಸೇವನೆ ಮಾಡಬೇಡಿ.ಇದರಿಂದ ಕಫ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments