ಬೆಂಗಳೂರು : ದೇವರ ಪೂಜೆಗೆ ಹೂಗಳನ್ನು ಬಳಸುತ್ತೇವೆ. ಮರುದಿನ ಆ ಹೂವುಗಳನ್ನು ತೆಗೆದು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಹೀಗೆ ಮಾಡಬಾರದಂತೆ. ಹೀಗೆ ಮಾಡಿದರೆ ದೇವರಿಗೆ ಅವಮಾನ ಮಾಡಿದಂತೆ ಎಂದು ಪಂಡಿತರು ಹೇಳುತ್ತಾರೆ. ಹಾಗಾದ್ರೆ ಆ ಹೂಗಳನ್ನು ಏನು ಮಾಡಬೇಕು ಎಂಬುದನ್ನು ಪಂಡಿತರು ತಿಳಿಸಿದ್ದಾರೆ.
ದೇವರ ಪೂಜೆಗೆ ಬಳಸಿದ ಹೂಗಳನ್ನು ಕಸದ ಬುಟ್ಟಿಗೆ ಎಸೆಯದೇ ಹರಿಯುವ ನದಿಯಲ್ಲಿ ಬಿಡಬೇಕು. ಅದು ಆಗದ ಪಕ್ಷದಲ್ಲಿ ಜನರು ಓಡಾಡುವ ಸ್ಥಳದಲ್ಲಿ ಇಡಬೇಕು. ಇಲ್ಲವಾದಲ್ಲಿ ಅವುಗಳನ್ನು ಒಣಗಿಸಿ ಗಿಡಗಳಿಗೆ ಬಳಸಬೇಕು ಎಂದು ಹೇಳುತ್ತಾರೆ. ಆದರೆ ಕಸದ ಬುಟ್ಟಿಗೆ ಮಾತ್ರ ಎಸೆಯಬಾರದಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ