Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಳೆಹಣ್ಣು ಹಾಳಾಗುವುದನ್ನು ತಡೆಗಟ್ಟಲು ಇಲ್ಲಿದೆ ಸುಲಭ ಉಪಾಯ

ಬಾಳೆಹಣ್ಣು ಹಾಳಾಗುವುದನ್ನು ತಡೆಗಟ್ಟಲು ಇಲ್ಲಿದೆ ಸುಲಭ ಉಪಾಯ
ಬೆಂಗಳೂರು , ಶನಿವಾರ, 28 ಜುಲೈ 2018 (06:48 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬಾಳೆಯನ್ನು ಸಹಜವಾಗಿ ಹಣ್ಣು ಮಾಡದೆ, ರಾಸಾಯನಿಕಗಳ ಮೂಲಕ ಮಾಗುವಂತೆ ಮಾಡಲಾಗುತ್ತದೆ. ಹೀಗೆ ಹಣ್ಣಾಗುವ ಬಾಳೆ, ಒಂದೆರೆಡು ದಿನಗಳಲ್ಲೇ ಕೊಳೆಯುತ್ತದೆ. ಹೀಗೆ ಹಾಳಾಗುವುದನ್ನು ತಡೆಗಟ್ಟಲು ಇಲ್ಲಿವೆ ಸುಲಭ ಉಪಾಯಗಳು.


ಅನೇಕ ತಂತ್ರಗಳ ಮೂಲಕ ಬಾಳೆಹಣ್ಣನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಬಹುದು. ಪ್ಲಾಸ್ಟಿಕ್ ಕವರ್​​ನಿಂದ ಬಾಳೆ ಗೊನೆಯ ಕಾಂಡವನ್ನು ಕಟ್ಟಿಟ್ಟರೆ ಬಾಳೆಹಣ್ಣು ಬೇಗನೆ ಹಾಳಾಗುವುದಿಲ್ಲ. ಅಲ್ಲದೆ ಬಾಳೆಹಣ್ಣನ್ನು ನೇತು ಹಾಕುವುದರಿಂದ ಸಹ ಕೊಳೆಯದಂತೆ ದೀರ್ಘಕಾಲ ಇಡಬಹುದು.


ಬಾಳೆಹಣ್ಣು ಕೆಡದಂತೆ ಮಾಡಲು ವಿಟಮಿನ್ ಸಿ ಮಾತ್ರೆಗಳನ್ನು(ಟ್ಯಾಬ್ಲೆಟ್) ಬಳಸಿಕೊಳ್ಳಬಹುದು. ವಿಟಮಿನ್ ಸಿ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ ಬಾಳೆಹಣ್ಣುಗಳನ್ನು ನೆನೆಸಿಡಬೇಕು. ನೀರಿನಿಂದ ತೆಗೆದ ಬಾಳೆಹಣ್ಣನ್ನು ಸಾಧಾರಣ ಉಷ್ಣಾಂಶವಿರುವ ಕೋಣೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಬಾಳೆಹಣ್ಣು ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ​


ಸೋಡ ನೀರಿನಿಂದ ಕೂಡ ಬಾಳೆಹಣ್ಣು ಬೇಗನೆ ಕೊಳೆಯದಂತೆ ಮಾಡಬಹುದು. ಸೋಡ ನೀರಿನಲ್ಲಿ ಬಾಳೆಹಣ್ಣುಗಳನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ. ನಂತರ ಉಷ್ಣಾಂಶ ಕಡಿಮೆ ಇರುವ ಕೋಣೆಯಲ್ಲಿ ಶೇಖರಿಸಿಡಬೇಕು. ಇದಲ್ಲದೆ ಸಿಟ್ರಿಕ್ ಆ್ಯಸಿಡ್​ನಲ್ಲೂ ಬಾಳೆಹಣ್ಣುಗಳನ್ನು ನೆನೆಸಿಡುವುದರಿಂದ ಬೇಗನೆ ಕೊಳೆಯನ್ನು ತಡೆಗಟ್ಟಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾದ ಐಸ್ ಕ್ರೀಮ್ ಮನೆಯಲ್ಲಿಯೇ ಮಾಡಿ ಸವಿಯಿರಿ