ಬೆಂಗಳೂರು: ಮದುವೆಯಾದ ಮೇಲೆ ಗಂಡ-ಹೆಂಡತಿ ಜತೆಯಾಗಿ ಮಲಗಲೇಬೇಕೆಂಬ ನಿಯಮವಿದೆಯೇ? ಕೇವಲ ದೈಹಿಕ ಸಂಬಂಧಕ್ಕೆ ಬೇಕಾಗಿ ಈ ರೀತಿ ಮಲಗಬೇಕೆಂದರೆ ಅದನ್ನು ಮುಗಿಸಿ ತಮ್ಮ ಪಾಡಿಗೆ ತಾವಿರಬಹುದಲ್ಲವೇ?
ಆದರೆ ಗಂಡ-ಹೆಂಡತಿ ಸಂಬಂಧ ಎನ್ನುವುದು ಕೇವಲ ದೈಹಿಕ ಸಂಬಂಧಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಜತೆಯಾಗಿ ಕಷ್ಟ ಸುಖ ಹಂಚಿಕೊಳ್ಳಲು ಇದುವೇ ಉತ್ತಮ ಸಮಯ. ಇಬ್ಬರ ನಡುವಿನ ಹೊಂದಾಣಿಕೆ, ಮನಸ್ಥಿತಿ ಒಬ್ಬರಿಗೊಬ್ಬರು ಅರಿಯುವುದು ಇದೇ ಸಮಯದಲ್ಲಿ.
ಹೀಗಾಗಿ ಜತೆಯಾಗಿ ಮಲಗುವುದು ಉತ್ತಮ. ಒಂದು ವೇಳೆ ಸಂಗಾತಿಯಲ್ಲಿ ಯಾರೇ ಆದರೂ ಜತೆಯಲ್ಲಿ ಮಲಗಲು ಇಷ್ಟಪಡುತ್ತಿಲ್ಲವೆಂದರೆ ಅಂತಹ ಸಂಬಂಧ ಹೆಚ್ಚು ಸುಮಧುರವಾಗಿರುವುದಿಲ್ಲ. ಗಂಡ-ಹೆಂಡತಿ ಜತೆಯಾಗಿ ಮಲಗುವುದು ಕೇವಲ ದೈಹಿಕ ವಾಂಛೆ ತೀರಿಸಿಕೊಳ್ಳಲು ಮಾತ್ರವಾಗಬಾರದು.