ಬೆಂಗಳೂರು: ಹೆಣ್ಣುಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ. ಹಾಗೋ ಹೀಗೂ ದುಡ್ಡು ಕೂಡಿಟ್ಟುಕೊಂಡು ದುಬಾರಿಯಾದ ರೇಷ್ಮೆ ಸೀರೆ ಕೊಂಡುಕೊಳ್ಳುತ್ತೇವೆ. ವರುಷವಾಗುವುದೊಳಗೆ ಅದು ತನ್ನ ಮೊದಲಿನ ಸೊಬಗು ಕಳೆದುಕೊಂಡರೆ ತುಂಬ ಬೇಸರವಾಗುತ್ತದೆ. ರೇಷ್ಮೆ ಸೀರೆಯನ್ನು ನಾಜೂಕಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಅನುಸರಿಸಿ ನಿಮ್ಮಿಷ್ಟದ ಸೀರೆಯನ್ನು ಕಾಪಾಡಿಕೊಳ್ಳಿ.
ಹತ್ತಿ ಬಟ್ಟೆಯಲ್ಲಿ ಸುತ್ತಿಡಿ : ನಿಮ್ಮ ಸೀರೆಯನ್ನು ಹೊಸದರಂತೆ ಕಾಪಾಡಲು ಒಂದು ಅಗಲವಾದ ಹತ್ತಿ ಬಟ್ಟೆಯಲ್ಲಿ ಸೀರೆಯನ್ನು ಸುತ್ತಿ ಇಡಿ.
ಬಿಸಿಲಿಗೆ ಇಡಿ : ರೇಷ್ಮೆ ಸೀರೆಯನ್ನು ಅಗಾಗ ಬಿಸಿಲಿಗೆ ಹಾಕಿ ಒಣಗಿಸಬೇಕು. ಇದರಿಂದ ಸೀರೆಯ ಬಣ್ಣ ಹಾಗೆಯೇ ಉಳಿಯುತ್ತದೆ.
ಡ್ರೈ ಕ್ಲೀನ್ ಮಾಡಿಸಿ : ಸೀರೆಯನ್ನು ಎರಡು ಮೂರು ಬಾರಿ ಧರಿಸಿದ ನಂತರ ಡ್ರೈ ಕ್ಲೀನ್ ಮಾಡಿಸಿ. ಪ್ರತಿ ಬಾರಿ ಅದನ್ನು ಧರಿಸಿದ ನಂತರ ಅದನ್ನು ಡ್ರೈ ಕ್ಲೀನ್ ಮಾಡಿಸುವುದು ಸರಿಯಲ್ಲ.
ಸ್ಪ್ರೇಯನ್ನು ದೂರದಿಂದ ಬಳಸಿ : ಇನ್ನು ರೇಷ್ಮೆ ಸೀತೆಯ ಮೇಲೆ ಯಾವುದೇ ಬಾಡಿ ಸ್ಪ್ರೇ, ಪರ್‌ಫ್ಯೂಮ್ ಅಥವಾ ಡಿಯೋಡ್ರಂಟ್ ಬಳಕೆ ಮಾಡಬೇಡಿ.