Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರೆ ನಿಮ್ಮ ಬೆಲೆ ಬಾಳುವ ರೇಷ್ಮೆ ಸೀರೆಗಳನ್ನು ಹೊಸದರಂತೆ ಇರಲು ಹೀಗೆ ಮಾಡಿ

ಮಹಿಳೆಯರೆ ನಿಮ್ಮ ಬೆಲೆ ಬಾಳುವ ರೇಷ್ಮೆ ಸೀರೆಗಳನ್ನು ಹೊಸದರಂತೆ ಇರಲು ಹೀಗೆ ಮಾಡಿ
ಬೆಂಗಳೂರು , ಭಾನುವಾರ, 4 ಫೆಬ್ರವರಿ 2018 (07:20 IST)
ಬೆಂಗಳೂರು : ರೇಷ್ಮೆ ಸೀರೆಗಳನ್ನು ಧರಿಸಿದರೆ ಮಹಿಳೆಯರ ಅಂದ ಇಮ್ಮಡಿಗೊಳ್ಳುತ್ತದೆ. ಹಾಗೆ ಬೆಲೆ ಬಾಳುವ ರೇಷ್ಮೆ ಸೀರೆಗಳ ಸೂಕ್ತ ನಿರ್ವಹಣೆ ಮಾಡುವುದರಿಂದ ಅವುಗಳು ಹೆಚ್ಚು ಕಾಲ ಬಾಳಿಕೆ ಬರುವುದು ಮಾತ್ರವಲ್ಲ, ಧರಿಸಿದಾಗ ಹೊಸ ಸೀರೆಯಂತೆ ಕಾಣುತ್ತವೆ ಎನ್ನುತ್ತಾರೆ ಡಿಸೈನರ್ಸ್‌. ಇದಕ್ಕಾಗಿ ಇಲ್ಲಿವೆ ಟಿಪ್ಸ್.


1. ಕವರ್‌ನಲ್ಲಿ ಬೇಡ :ರೇಷ್ಮೆ ಸೀರೆಗಳನ್ನು ಎಂದಿಗೂ ಪ್ಲಾಸ್ಟಿಕ್‌ ಕವರ್‌ಗಳಲ್ಲಿಡಬೇಡಿ. ಇವುಗಳನ್ನು ಇರಿಸಲು ಪೇಪರ್‌ ಕವರ್‌ಗಳು ದೊರೆಯುತ್ತವೆ. ಅವುಗಳಲ್ಲಿರಿಸಿ.
2. ಗುಳಿಗೆ ಒಳಗಿರಿಸಬೇಡಿ: ರೇಷ್ಮೆ ಸೀರೆಗಳನ್ನು ಮಡಿಸಿಡುವಾಗ ಜಿರಲೆ, ಕ್ರೀಮಿ ಕೀಟಗಳು ಬರದಂತೆ ನೋಡಿಕೊಳ್ಳಿ. ಸೀರೆಗಳನ್ನು ಕ್ರೀಮಿಕೀಟಗಳಿಂದ ಕಾಪಾಡುವ ಸುರಕ್ಷತಾ ಗುಳಿಗೆಗಳನ್ನು ಅದರೊಳಗೆ ಇರಿಸಬೇಡಿ. ಕಲೆಯಾಗುವ ಸಂಭವವಿರುತ್ತದೆ. ಬದಲಿಗೆ ಮೂಲೆಯಲ್ಲಿರಿಸಿ.
3. ಹರಡಿ ಒಣಗಿಸಿ: ಎರಡು ತಿಂಗಳಿಗೊಮ್ಮೆ ರೇಷ್ಮೆ ಸೀರೆಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿಡಿ. ಸೀರೆಯು ಗಾಳಿಯಲ್ಲಿ ಹಾಗೂ ಎಳೆ ಬಿಸಿಲಲ್ಲಿ ಒಣಗಿದಾಗ ವಾಸನೆ ಬರುವುದಿಲ್ಲ. ಮತ್ತೆ ಮಡಿಸಿಡಿ.
3. ಗೆರೆ ಮೂಡಕೂಡದು : ಬಹಳ ಕಾಲ ಮಡಿಸಿಟ್ಟ ಸೀರೆಗಳಲ್ಲಿ ಗೆರೆ ಮೂಡಿ ಹರಿದು ಹೋಗುವ ಸಂಭವವಿರುತ್ತದೆ. ಹಾಗಾಗಿ ಕಬ್ಬಿಣದ ಹ್ಯಾಂಗರ್‌ನಲ್ಲಿ ಹಾಕಿಡಬೇಡಿ. ಸೂಟ್‌ಕೇಸ್‌ ಹಾಗೂ ಪೆಟ್ಟಿಗೆಯಲ್ಲಿರಿಸಬೇಡಿ. ಬದಲಿಗೆ ಕಬೋರ್ಡ್‌ನಲ್ಲಿ ಕಾಟನ್‌ ಬಟ್ಟೆಯನ್ನು ಹಾಸಿ ಅದರ ಮೇಲೆ ಇರಿಸಿ.
4. ಮನೆಯಲ್ಲಿ ಒಗೆಯಬೇಡಿ: ಯಾವುದೇ ಕಾರಣಕ್ಕೂ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಮನೆಯಲ್ಲಿ ಒಗೆಯಬೇಡಿ. ಬದಲಿಗೆ ಡ್ರೈವಾಶ್‌ಗೆ ನೀಡಿ. ಅಗತ್ಯವಿದ್ದರೆ ಮಾತ್ರ ವಾಶ್‌ ಮಾಡಿಸುವುದು ಉತ್ತಮ. ಇಲ್ಲವಾದಲ್ಲಿ ಸೀರೆಯ ರಂಗು ಮಸುಕಾಗಬಹುದು.
5. ಬಟ್ಟೆಯಲ್ಲಿ ಸುತ್ತಿಡಿ: ರೇಷ್ಮೆ ಸೀರೆಯ ಬಾರ್ಡರ್‌ ಬೆಲೆಬಾಳುವಂಥದ್ದಾಗಿರುತ್ತದೆ. ಅಗಲವಾದ ಬಾರ್ಡರ್‌ಗಳಿರುವ ಸೀರೆಗಳನ್ನು ಒಂದು ತೆಳುವಾದ ಬಟ್ಟೆಯಲ್ಲಿ ಸುತ್ತಿಡಬೇಕು. ಧೂಳು ಬೀಳದಿರುವಂತಹ ಸ್ಥಳದಲ್ಲಿಟ್ಟರೆ ಸೀರೆಗಳ ಬಾರ್ಡರ್‌ ಹಾಳಾಗುವುದಿಲ್ಲ.
6. ಐರನ್‌ ಮಾಡುವಾಗ ಎಚ್ಚರ: ಸೀರೆಯ ಬಾರ್ಡರ್‌ಗೆ ಐರನ್‌ ಮಾಡುವಾಗ, ನೇರವಾಗಿ ಸೀರೆಯ ಮೇಲೆ ಮಾಡದೇ ಒಂದು ಪೇಪರ್‌ ಹರವಿ ಅದರ ಮೇಲೆ ಮಾಡಿದರೆ, ಸೀರೆಯ ಬಾರ್ಡರ್‌ ಹಾಳಾಗುವುದು ತಪ್ಪುತ್ತದೆ. ಶಾಖ ಹೆಚ್ಚಾಗಕೂಡದು. ಬಾರ್ಡರ್‌ ಕಪ್ಪಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೀನನ್ನು ತಡೆ ಹಿಡಿದರೆ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹುಷಾರು!