Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ತನ ಕ್ಯಾನ್ಸರ್ ನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?

ಸ್ತನ ಕ್ಯಾನ್ಸರ್ ನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?
ಬೆಂಗಳೂರು , ಶುಕ್ರವಾರ, 26 ಜನವರಿ 2018 (11:56 IST)
ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಈಗ ಮಹಿಳೆಯರಲ್ಲಿ ಮಾತ್ರವಲ್ಲದೆ ಪುರುಷರಲ್ಲಿಯೂ ಕಂಡುಬರುತ್ತಿದೆ. ಸ್ತನ ಕ್ಯಾನ್ಸರ್ ಗೆ ನಿರ್ದಿಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ ಕೆಲವು ಅಂಶಗಳನ್ನು ಅಪಾಯಕರ ಅಂಶವೆಂದು ಆರೋಗ್ಯ ತಜ್ಞರು ಗುರುತಿಸಿದ್ದಾರೆ. ಅವುಗಳೆಂದರೆ ಅನುವಂಶೀಯತೆ, ಭೌಗೋಳಿಕ ಅಂಶಗಳು, ಬೊಜ್ಜು ,  ಆಹಾರದಲ್ಲಿ ಅಧಿಕ ಕೊಬ್ಬಿನಾಂಶದ ಸೇವನೆ, ಅಧಿಕ ಮದ್ಯಮಾನ, ಹಾಗು ಶರೀರದಲ್ಲಿನ ಹಾರ್ಮೋನುಗಳಲ್ಲಿನ ಏರುಪೇರು ಮುಂತಾದವುಗಳು.


ಸ್ತನ ಕ್ಯಾನ್ಸರ್ ಗಳನ್ನು ಪ್ರಾಥಮಿಕ ಹಂತದಂತೆ ಕಂಡುಹಿಡಿಯಬಹುದು. ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಹಾಗು ಮ್ಯಾಮೋಗ್ರ್ಯಾಫಿ ಪರೀಕ್ಷೆಗಳು ಸ್ತನ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತಗಳಲ್ಲಿಯೇ ಪತ್ತೆ ಹಚ್ಚುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.   ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಮೂಲಕ 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆಯೂ ಸ್ವತಃ ತನ್ನ ಎರಡು ಸ್ತನಗಳನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬಹುದು. ಇದನ್ನು ಪ್ರತಿ ತಿಂಗಳ ಋತುಸ್ರಾವದ ನಂತರ ಮಾಡಿಕೊಳ್ಳುವುದು ಸೂಕ್ತ.
ಕನ್ನಡಿ ಮುಂದೆ ಮೂರು ಭಂಗಿಗಳಲ್ಲಿ ನಿಂತು ಸ್ತನಗಳನ್ನು ಪರೀಕ್ಷಿಸಿಕೊಳ್ಳಬಹುದು. ಮೊದಲನೇಯದಾಗಿ ನೇರವಾಗಿ ಕೈಗಳನ್ನು ದೇಹದ ಪಕ್ಕದಲ್ಲಿರಿಸಿ, ನಂತರ ಕೈಗಳನ್ನು ಭುಜಗಳ ಮೇಲೆ ಚಾಚಿ, ದೇಹವನ್ನು ಸ್ವಲ್ಪ ಮುಂದಕ್ಕೆ ಭಾಗಿಸಿ, ಕಡೆಯದಾಗಿ ಎರಡೂ ಕೈಗಳನ್ನು ಸೊಂಟದ ಮೇಲಿರಿಸಿ ದೇಹವನ್ನು ಸ್ವಲ್ಪ ಮುಂದಕ್ಕೆ ಭಾಗಿಸಿ ನಿಂತು ಕೆಲವು ಅಂಶಗಳನ್ನು ಎರಡು ಸ್ತನಗಳಲ್ಲಿ ಗಮನಿಸಬೇಕು. ಅದೇನೆಂದರೆ ಸ್ತನದ ಮೇಲಿನ ಚರ್ಮ ಮೇಲೆ ಅಸಹಜ ಕೆಂಪಾಗುವಿಕೆ., ಸ್ತನದ ಚರ್ಮ ಒಣಗಿದ ಹಾಗೆ ಇದ್ದು, ಒಳಕ್ಕೆ ಎಳೆದುಕೊಂಡಂತಾಗಿರುವುದು, ಚರ್ಮದ ಮೇಲೆ ಅಸಹಜ ಉಬ್ಬಿದ ರಕ್ತನಾಳಗಳಿರುವುದು, ಸ್ತನದ ತೊಟ್ಟುಗಳು ಒಳಕ್ಕೆ ಎಳೆದುಕೊಂಡಂತಾಗಿರುವುದು, ಸ್ತನದ ತೊಟ್ಟಿನಲ್ಲಿ ದ್ರವದಂತಹ ವಸ್ತು ಅಥವಾ ರಕ್ತ ಸ್ರಾವ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಚರ್ಮದವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಗೊತ್ತಾ...?