Publish Date: Friday, 19 June 2020 (09:02 IST)
Updated Date: Friday, 19 June 2020 (09:03 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಆಹಾರ ಶೈಲಿಯಿಂದಾಗಿ ಮಕ್ಕಳಲ್ಲಿಯೂ ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆ ಸಾಮಾನ್ಯವಾಗಿದೆ. ಒಂದು ವೇಳೆ ನಿಮ್ಮ ಮಕ್ಕಳ ಬೆಳ್ಳಂ ಬೆಳಿಗ್ಗೆಯೇ ಅಸಿಡಿಟಿ ಎಂದು ಹೊಟ್ಟೆ ಹಿಡಿದು ಕೂರುತ್ತಿದ್ದರೆ ಹೀಗೆ ಮಾಡಿ.
ಆದಷ್ಟು ಬೆಳಿಗ್ಗೆ ಎದ್ದ ತಕ್ಷಣ ಅವರಿಗೆ ಹದ ಬಿಸಿ ನೀರು ಕುಡಿಯಲು ಕೊಡಿ. ಇದಾದ ಬಳಿಕ ಸಪಾಟೆ ನೆಲದ ಮೇಲೆ ಮಲಗಿಸಿ ಹೊಟ್ಟೆ ಮೇಲೆ ಮೃದುವಾಗಿ ಮಸಾಜ್ ಮಾಡಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಆಹಾರ ಸೇವಿಸಿದ ಬಳಿಕ ಹೊಟ್ಟೆ ನೋವು ಬರುವುದು ಇತ್ಯಾದಿ ಸಮಸ್ಯೆಗಳಿಂದ ದೂರವಾಗಬಹುದು.