ವಾಂತಿ ಸಮಸ್ಯೆ ನಿಮಗೆ ಕಾಡುತ್ತಿದ್ದರೆ, ಮನೆಮದ್ದುಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಿರುವಾಗ ಯಾವ ಮನೆಮದ್ದುಗಳನ್ನು ಬಳಸಬಹುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಕೆಲವು ಸಲಹೆಗಳು.
ಕೆಲವು ಬಾರಿ ರಸ್ತೆಯ ಅಕ್ಕ ಪಕ್ಕದಲ್ಲಿ ಸಿಗುವ ತಿಂಡಿಗಳನ್ನು ಅತಿಯಾಗಿ ತಿಂದು ಕೆಲವರಿಗೆ ಹೊಟ್ಟೆ ನೋವು, ವಾಕರಿಕೆ ಬರುವಂತಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿರಬಹುದು. ಇದರಿಂದಾಗಿ ದೈಹಿಕ ಸಮಸ್ಯೆ ಜತೆಗೆ ಮಾನಸಿಕ ಅಸ್ವಸ್ಥತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಾಂತಿ ಸಮಸ್ಯೆ ನಿಮಗೆ ಕಾಡುತ್ತಿದ್ದರೆ, ಮನೆಮದ್ದುಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಿರುವಾಗ ಯಾವ ಮನೆಮದ್ದುಗಳನ್ನು ಬಳಸಬಹುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಕೆಲವು ಸಲಹೆಗಳು. ಪುದೀನ
ನೈಸರ್ಗಿಕವಾಗಿ ಮನೆಯಲ್ಲಿಯೇ ಬೆಳೆದ ಪುದೀನ ಎಲೆಗಳನ್ನು ಅಗಿದು ರಸ ಸೇವಿಸುವ ಮೂಲಕ ವಾಕರಿಕೆ ಸಮಸ್ಯೆಯನ್ನು ದೂರವಾಗಿಸಬಹುದು. ಇದು ಹೊಟ್ಟೆ ನೋವು, ಅಜೀರ್ಣ ಈ ರೀತಿಯ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಶುಂಠಿ
ಶುಂಠಿಯು ಹೊಟ್ಟೆಯಲ್ಲಿನ ಸಮಸ್ಯೆಯಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಂತಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಶುಂಠಿ ನೀರು, ಶುಂಠಿ ಕಷಾಯ ಸೇವನೆ ಒಳ್ಳೆಯದು. ಇಲ್ಲವೇ ಶುಂಠಿ, ಲಿಂಬು ರಸ ಮತ್ತು ರುಚಿಗೆ ಚೂರು ಉಪ್ಪು ಮಿಶ್ರಣ ಮಾಡಿ ಸವಿಯುವ ಮೂಲಕ ಅಜೀರ್ಣ ಸಮಸ್ಯೆ ನಿವಾರಣೆ ಆಗುತ್ತದೆ. ಈ ಮೂಲಕ ನಿಮ್ಮ ವಾಕರಿಕೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಲವಂಗ
ಲವಂಗ ಅಗಿದು ರಸ ನುಂಗುವ ಮೂಲಕವೂ ಸಹ ವಾಕರಿಕೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಲವಂಗದ ಪರಿಮಳ ಮತ್ತು ರುಚಿ ವಾಂತಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಏಲಕ್ಕಿ
ಏಲಕ್ಕಿ ವಾಕರಿಕೆ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಏಲಕ್ಕಿ ಬೀಜಗಳನ್ನು ಅಗಿಯುವ ಮೂಲಕ ವಾಕರಿಕೆಯನ್ನು ಶಮನಗೊಳಿಸಬಹುದು. ಇಲ್ಲವೇ ಏಲಕ್ಕಿ ಬೀಜವನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವ ಮೂಲಕ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.