Publish Date: Sun, 30 May 2021 (09:49 IST)
Updated Date: Sun, 30 May 2021 (09:52 IST)
ಬೆಂಗಳೂರು : ನಮ್ಮ ಜೀವನಶೈಲಿ, ತಿನ್ನುವ ಆಹಾರದಿಂದ ಕೆಲವೊಮ್ಮೆ ಆರೋಗ್ಯದಲ್ಲಿ ಸಮಸ್ಯೆ ಕಾಡುತ್ತದೆ. ಇದು ವಾಂತಿ, ಅತಿಸಾರಕ್ಕೆ ಕಾರಣವಾಗುತ್ತದೆ. ಇದರಿಂದ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಇದನ್ನು ಸೇವಿಸಿ.
ಅತಿಸಾರ, ವಾಂತಿಯು ದೇಹದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಮೆಗ್ನಿಸಿಯಂ ಕೊರತೆಯನ್ನುಂಟು ಮಾಡುತ್ತದೆ. ಇದು ಕೈಕಾಲು ನೋವು ಮತ್ತು ಕರುಳಿನ ಚಲನೆ ಮತ್ತು ಹೃದಯಬಡಿತವನ್ನು ಕಡಿಮೆ ಮಾಡುತ್ತದೆ. ಇದರಿಂದ ತಲೆತಿರುಗುವಿಕೆ, ಮೂರ್ಛೆ ಹೋಗುವ ಸಮಸ್ಯೆ ಕಾಡುತ್ತದೆ.
ಹಾಗಾಗಿ ವಾಂತಿ ಅತಿಸಾರ ಸಂಭವಿಸಿದಾಗ ಸಿಟ್ರಸ್ ಹಣ‍್ಣುಗಳನ್ನು ಹೆಚ್ಚಾಗಿ ಸೇವಿಸಿ. ನಿಂಬೆ ಪಾನಕ, ಉಪ್ಪು ಸಕ್ಕರೆ ಪಾಕವನ್ನು ತಯಾರಿಸಿ ಸೇವಿಸಿ. ಸಾಕಷ್ಟು ನೀರನ್ನು ಕುಡಿಯಿರಿ. ಖನಿಜ ಕೊರತೆಯನ್ನು ನೀಗಿಸಲು ಕಿತ್ತಳೆ, ಬಾಳೆಹಣ‍್ಣು, ನಿಂಬೆಯನ್ನು ಸೇವಿಸಬೇಕು. ಒಂದು ವೇಳೆ ನೀವು ಈ ಖನಿಜಾಂಶಗಳನ್ನು ಪೂರೈಸದಿದ್ದರೆ ಮೂತ್ರಪಿಂಡಗಳು ವಿಫಲವಾಗಬಹುದು.