ಬೆಂಗಳೂರು: ಇಂದಿನ ವೇಗದ ಜೀವನ ಶೈಲಿಯಲ್ಲಿ ತಲೆಹೊಟ್ಟು ಸಮಸ್ಯೆ ಹಲವರನ್ನು ಭಾದಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ‘ಬಿ’, ‘ಸಿ’ ಹಾಗೂ ‘ಇ’ ಮತ್ತು ಶರ್ಕರಪಿಷ್ಟ ಇದ್ದರೆ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು.
*ವಾರಕ್ಕೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದ ಹಸಿಮೊಟ್ಟೆ ಹಳದಿ ಲೋಳೆಯನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಕೂದಲು ತೊಳೆದುಕೊಂಡರೆ ತಲೆ ಹೊಟ್ಟು ನಿಯಂತ್ರಣ ವಾಗುವುದಲ್ಲದೆ ಕೂದಲು ಮೃದುವಾಗಿ ಹೊಳಪು ಬರುತ್ತದೆ.
*ಸೇಬಿನ ವಿನೆಗರ್ಅನ್ನು ನೀರಿನಲ್ಲಿ ಬೆರೆಸಿ ಪೂರ್ತಿಯಾಗಿ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೇ ಬಿಟ್ಟು ಬೆಳಿಗ್ಗೆ ಎಗ್ ಶ್ಯಾಂಪೂ ಬಳಸಿ ತೊಳೆದುಕೊಳ್ಳಬೇಕು.
*ಬೆಚ್ಚಗಿನ ಎಣ್ಣೆಯ ಉಪಚಾರ ತಲೆ ಹೊಟ್ಟನ್ನು ನಿವಾರಿಸಲು ಅತ್ಯಂತ ಸರಳ ಉಪಾಯವಾಗಿದೆ. ಆಲೀವ್ ಆಯಿಲ್, ಆ್ಯಲೋ ಅಥವಾ ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿಕೊಂಡು ನಂತರ ಬಿಸಿ ನೀರಿನಲ್ಲಿ ಅದ್ದಿದ ಟವಲ್ಅನ್ನು ತಲೆಗೆ ಸುತ್ತಿ ನಂತರ ತೊಳೆದುಕೊಳ್ಳಬೇಕು.
*ತೆಂಗಿನ ಹಾಲಿಗೆ ಬಿಸಿ ನೀರು ಮತ್ತು ಲಿಂಬೆರಸ ಬಳಸಿ ಈ ಮಿಶ್ರಣವನ್ನು ತಲೆಬುರುಡೆಗೆ ಬಳಿದುಕೊಳ್ಳಬೇಕು. ಅರ್ಧಗಂಟೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.
*ರೋಸ್ ಮೇರಿ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ತಲೆ ಬುರುಡೆಗೆ ಲೇಪನದಂತೆ ಹಚ್ಚಿಕೊಂಡರೆ ಪರಿಣಾಮಕಾರಿಯಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ.
*ನಾಲ್ಕು ಟೇಬಲ್ ಸ್ಪೂನ್ ಒಡೆದ ಹಾಲಿನ ರಸ, ನಾಲ್ಕು ಟೇಬಲ್ ಸ್ಪೂನ್ ಕರ್ಪೂರ ಮಿಶ್ರಣ ನೀರನ್ನು ಬೆರೆಸಿ ತಲೆಗೆ ಹಚ್ಚಿಕೊಂಡು ಮೂರು ಗಂಟೆಗಳ ನಂತರ ತೊಳೆದುಕೊಳ್ಳಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ