Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಡುತ್ತಿರುವ ತಲೆಹೊಟ್ಟಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಕಾಡುತ್ತಿರುವ ತಲೆಹೊಟ್ಟಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
, ಮಂಗಳವಾರ, 1 ಮೇ 2018 (14:10 IST)
ಬೆಂಗಳೂರು: ಇಂದಿನ ವೇಗದ ಜೀವನ ಶೈಲಿಯಲ್ಲಿ  ತಲೆಹೊಟ್ಟು ಸಮಸ್ಯೆ ಹಲವರನ್ನು ಭಾದಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ವಿಟಮಿನ್‌ ‘ಬಿ’, ‘ಸಿ’ ಹಾಗೂ ‘ಇ’ ಮತ್ತು ಶರ್ಕರಪಿಷ್ಟ ಇದ್ದರೆ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು.


*ವಾರಕ್ಕೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದ ಹಸಿಮೊಟ್ಟೆ ಹಳದಿ ಲೋಳೆಯನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಕೂದಲು ತೊಳೆದುಕೊಂಡರೆ ತಲೆ ಹೊಟ್ಟು ನಿಯಂತ್ರಣ ವಾಗುವುದಲ್ಲದೆ ಕೂದಲು ಮೃದುವಾಗಿ ಹೊಳಪು ಬರುತ್ತದೆ.


*ಸೇಬಿನ ವಿನೆಗರ್‌ಅನ್ನು ನೀರಿನಲ್ಲಿ ಬೆರೆಸಿ ಪೂರ್ತಿಯಾಗಿ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೇ ಬಿಟ್ಟು ಬೆಳಿಗ್ಗೆ ಎಗ್‌ ಶ್ಯಾಂಪೂ ಬಳಸಿ ತೊಳೆದುಕೊಳ್ಳಬೇಕು.


*ಬೆಚ್ಚಗಿನ ಎಣ್ಣೆಯ ಉಪಚಾರ ತಲೆ ಹೊಟ್ಟನ್ನು ನಿವಾರಿಸಲು ಅತ್ಯಂತ ಸರಳ ಉಪಾಯವಾಗಿದೆ. ಆಲೀವ್‌ ಆಯಿಲ್‌, ಆ್ಯಲೋ ಅಥವಾ ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಮಸಾಜ್‌ ಮಾಡಿಕೊಂಡು ನಂತರ ಬಿಸಿ ನೀರಿನಲ್ಲಿ ಅದ್ದಿದ ಟವಲ್‌ಅನ್ನು ತಲೆಗೆ ಸುತ್ತಿ ನಂತರ ತೊಳೆದುಕೊಳ್ಳಬೇಕು.


*ತೆಂಗಿನ ಹಾಲಿಗೆ ಬಿಸಿ ನೀರು ಮತ್ತು ಲಿಂಬೆರಸ ಬಳಸಿ ಈ ಮಿಶ್ರಣವನ್ನು ತಲೆಬುರುಡೆಗೆ ಬಳಿದುಕೊಳ್ಳಬೇಕು. ಅರ್ಧಗಂಟೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.


*ರೋಸ್‌ ಮೇರಿ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ತಲೆ ಬುರುಡೆಗೆ ಲೇಪನದಂತೆ ಹಚ್ಚಿಕೊಂಡರೆ ಪರಿಣಾಮಕಾರಿಯಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ.


*ನಾಲ್ಕು ಟೇಬಲ್‌ ಸ್ಪೂನ್‌ ಒಡೆದ ಹಾಲಿನ ರಸ, ನಾಲ್ಕು ಟೇಬಲ್‌ ಸ್ಪೂನ್‌ ಕರ್ಪೂರ ಮಿಶ್ರಣ ನೀರನ್ನು  ಬೆರೆಸಿ ತಲೆಗೆ ಹಚ್ಚಿಕೊಂಡು ಮೂರು ಗಂಟೆಗಳ ನಂತರ ತೊಳೆದುಕೊಳ್ಳಬೇಕು.




ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಟ್ಟಿದರೆ ಮುನಿ ಸಸ್ಯ ಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ...?