Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲ್ಲಿಗಳನ್ನು ಮನೆಯಿಂದ ಓಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ

ಹಲ್ಲಿಗಳನ್ನು ಮನೆಯಿಂದ ಓಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2017 (10:21 IST)
ಬೆಂಗಳೂರು: ಮನೆಯ ಗೊಡೆಗಳ ಮೇಲೆ ಹಲ್ಲಿಗಳು ಯಾವಾಗಲೂ ಓಡಾಡುತ್ತಾ ಇರುವುದನ್ನು ನಾವು ನೋಡಿರುತ್ತೆವೆ. ಅವು ಮನೆಯ ಗೋಡೆಗಳ ಮೇಲೆ ಗಲೀಜುಗಳನ್ನು ಮಾಡುತ್ತಿರುತ್ತವೆ. ಹಾಗೆ ಓಡಾಡುವಾಗ ಆಯತಪ್ಪಿ ಮೈಮೇಲೆ ಕೂಡ ಬೀಳುತ್ತವೆ. ಕೆಲವೊಮ್ಮೆ ಮಾಡಿರುವ ಅಡುಗೆಗಳ ಮೇಲೆ ಬೀಳುತ್ತವೆ. ಅವುಗಳಲ್ಲಿ ವಿಷವಿರುವುದರಿಂದ ತಿನ್ನುವ ಆಹಾರದಲ್ಲಿ ಬಿದ್ದರೆ ಜೀವಕ್ಕೆ ಅಪಾಯವಾಗುತ್ತದೆ. ಆದ್ದರಿಂದ ಅವುಗಳನ್ನು ಮನೆಯಿಂದ ಓಡಿಸುವುದೆ  ಉತ್ತಮ. ಅವುಗಳನ್ನು ಮನೆಯಿಂದ ಓಡಿಸಲು ಸುಲಭ ಮಾರ್ಗಗಳಿವೆ.


ಮೊಟ್ಟೆಯ ವಾಸನೆ ಹಲ್ಲಿಗಳಿಗೆ ಹಿಡಿಸುವುದಿಲ್ಲವಾದ್ದರಿಂದ ಒಡೆದ ಮೊಟ್ಟೆಯ ಹೊರಕವಚವನ್ನು ಹಲ್ಲಿ ಓಡಾಡುವ ಸ್ಥಳದಲ್ಲಿ ನೇತು ಹಾಕಿದರೆ ಅವು ಮನೆ ಬಿಟ್ಟು ಹೊರಹೋಗುತ್ತವೆ. ಹಾಗೆಯೆ ಈರುಳ್ಳಿ ವಾಸನೆ ಕೂಡ ಹಲ್ಲಿಗೆ ಸಹಿಸಿಕೊಳ್ಳಲಾಗದ ಕಾರಣ ಈರುಳ್ಳಿಯನ್ನು ರುಬ್ಬಿ ನೀರಿನೊಂದಿಗೆ ಬೇರೆಸಿ ಹಲ್ಲಿ ಓಡಾಡುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಅವುಗಳ ಕಿರಿಕಿರಿ ಇರುವುದಿಲ್ಲ.
ಅಲಲ್ಲಿ ಬೆಳ್ಳುಳ್ಳಿ ಗೊಂಚಲನ್ನು ಕಟ್ಟಿ ನೇತು ಹಾಕುವುದರಿಂದ ಕೂಡ ಹಲ್ಲಿಗಳನ್ನು ಮನೆಯಿಂದ ಓಡಿಸಬಹುದು. ಕಾಫಿ ಬೀಜ ಹಾಗು ತಂಬಾಕು ಮಿಶ್ರಣವನ್ನು ಕುಟ್ಟಿ ಉಂಡೆಯನ್ನಾಗಿ ಮಾಡಿ ಟೂತ್ ಪಿಕ್ ನಲ್ಲಿ ಕಟ್ಟಿ ನೇತು ಹಾಕುವುದರಿಂದಲೂ  ಹಲ್ಲಿಗಳನ್ನು ದೂರವಿರಿಸಬಹುದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಯಿಲ್ ಸ್ಕಿನ್ ನಿವಾರಣೆಗೆ ಸರಳ ಮನೆಮದ್ದು