ತರಕಾರಿಗಳು, ಕಾಯಿ-ಪಲ್ಯೆಗಳು, ಹಣ್ಣುಗಳು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅಂತಹ ತರಕಾರಿಗಳಲ್ಲಿ ಎಲೆಕೋಸೂ ಕೂಡಾ ಒಂದು ಎಂದು ಹೇಳಬಹುದು.
ಈ ತರಕಾರಿಯು ವರ್ಷದ ಎಲ್ಲಾ ಸಮಯದಲ್ಲಿಯೂ ಸಿಗುತ್ತದೆ. ಹೆಸರಿಗೆ ತಕ್ಕಂತೆ ಎಲೆಗಳ ಪದರದಿಂದಲೇ ಆವೃತವಾಗಿರುವ ಈ ತರಕಾರಿಯು ಕೇವಲ ಆರೋಗ್ಯಕ್ಕೆ ಅಷ್ಟೇ ಅಲ್ಲದೇ ಸೌಂದರ್ಯವರ್ಧನೆಯಲ್ಲಿಯೂ ಬಳಕೆಯಾಗುತ್ತದೆ.
- ಎಲೆಕೋಸಿನಲ್ಲಿರುವ ಬೀಟಾ ಕೆರೋಟಿನ್ ಕಣ್ಣಿನ ರಕ್ಷಣೆಗೆ ಅಗತ್ಯವಾಗಿದ್ದು, ಇದರ ಸೇವನೆಯಿಂದಾಗಿ ಕಣ್ಣಿನ ಪೊರೆ ಆಗುವುದು ತಪ್ಪುತ್ತದೆ.
- ಮಲಬದ್ದತೆ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಶಕ್ತಿ ಎಲೆಕೋಸಿಗಿದೆ.
- ಎಲೆಕೋಸಿನಲ್ಲಿರುವ ಸಮೃದ್ಧ ಅಮೈನೊ ಆಮ್ಲಗಳು ಉರಿಯೂತದ ಮೇಲೆ ಪ್ರಭಾವ ಬೀರುತ್ತದೆ.
- ಎಲೆಕೋಸಿನಲ್ಲಿ ಕಬ್ಬಿಣಾಂಶವು ಇರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುವುದಲ್ಲದೇ ರಕ್ತಸಂಚಾರವನ್ನು ಉತ್ತಮಪಡಿಸಿ ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ.
- ಎಲೆಕೋಸಿನಲ್ಲಿರುವ ಕೆ ಜೀವಸತ್ವವು ಮರೆವಿನ ರೋಗ ಬಾರದಂತೆ ತಡೆಯುವ ಶಕ್ತಿಯಿದೆ.
ಕೆಲವೊಮ್ಮೆ ನಮ್ಮ ನಮ್ಮ ಮನೆಯ ಅಂಗಳದಲ್ಲಿಯೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ತರಕಾರಿಗಳು ಇರುತ್ತವೆ. ಆದರೆ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೆ. ಎಲೆಕೋಸಿನಿಂದ ನಾವು ಪದಾರ್ಥಗಳಷ್ಟೇ ಅಲ್ಲದೇ ಸೌಂದರ್ಯವರ್ಧಕವನ್ನಾಗಿಯೂ ಬಳಸಬಹುದು. ಆದರೆ ಸೌಂದರ್ಯವರ್ಧಕವಾಗಿ ಬಳಸುವ ಮೊದಲು ಚರ್ಮರೋಗ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಒಳಿತು.