ತರಕಾರಿಗಳು, ಕಾಯಿ-ಪಲ್ಯೆಗಳು, ಹಣ್ಣುಗಳು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅಂತಹ ತರಕಾರಿಗಳಲ್ಲಿ ಎಲೆಕೋಸೂ ಕೂಡಾ ಒಂದು ಎಂದು ಹೇಳಬಹುದು.
ಈ ತರಕಾರಿಯು ವರ್ಷದ ಎಲ್ಲಾ ಸಮಯದಲ್ಲಿಯೂ ಸಿಗುತ್ತದೆ. ಹೆಸರಿಗೆ ತಕ್ಕಂತೆ ಎಲೆಗಳ ಪದರದಿಂದಲೇ ಆವೃತವಾಗಿರುವ ಈ ತರಕಾರಿಯು ಕೇವಲ ಆರೋಗ್ಯಕ್ಕೆ ಅಷ್ಟೇ ಅಲ್ಲದೇ ಸೌಂದರ್ಯವರ್ಧನೆಯಲ್ಲಿಯೂ ಬಳಕೆಯಾಗುತ್ತದೆ.
- ಎಲೆಕೋಸಿನಲ್ಲಿರುವ ಬೀಟಾ ಕೆರೋಟಿನ್ ಕಣ್ಣಿನ ರಕ್ಷಣೆಗೆ ಅಗತ್ಯವಾಗಿದ್ದು, ಇದರ ಸೇವನೆಯಿಂದಾಗಿ ಕಣ್ಣಿನ ಪೊರೆ ಆಗುವುದು ತಪ್ಪುತ್ತದೆ.
- ಮಲಬದ್ದತೆ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಶಕ್ತಿ ಎಲೆಕೋಸಿಗಿದೆ.
- ಎಲೆಕೋಸಿನಲ್ಲಿರುವ ಸಮೃದ್ಧ ಅಮೈನೊ ಆಮ್ಲಗಳು ಉರಿಯೂತದ ಮೇಲೆ ಪ್ರಭಾವ ಬೀರುತ್ತದೆ.
- ಎಲೆಕೋಸಿನಲ್ಲಿ ಕಬ್ಬಿಣಾಂಶವು ಇರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುವುದಲ್ಲದೇ ರಕ್ತಸಂಚಾರವನ್ನು ಉತ್ತಮಪಡಿಸಿ ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ.
- ತ್ವಚೆಯ ತೊಂದರೆಗಳಾದ ಮೊಡವೆ, ಕೀಟಗಳ ಕಡಿತ, ಚಿಕ್ಕಪುಟ್ಟ ಗಾಯಗಳು, ತುರಿಕೆ ಮೊದಲಾದವುಗಳಿಗೆ ಎಲೆಕೋಸನ್ನು ಅರೆದು ಹಿಂಡಿ ತೆಗೆದ ರಸವನ್ನು ಹಚ್ಚುವುದರಿಂದ ತಣ್ಣನೆಯ ್ನುಭವದ ಮೂಲಕ ತುರಿಕೆಯನ್ನು ನಿವಾರಿಸುತ್ತದೆ.
- ಎಲೆಕೋಸಿನಲ್ಲಿರುವ ಸಿ ವಿಟಾಮಿನ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಫ್ರೀ ರಾಡಿಕಲ್‌ಗಳನ್ನೂ ಸಹ ಇದು ಹದ್ದುಬಸ್ತಿನಲ್ಲಿಟ್ಟಿರುತ್ತದೆ.
- ಎಲೆಕೋಸಿನಲ್ಲಿರುವ ಕೆ ಜೀವಸತ್ವದಿಂದಾಗಿ ಇದನ್ನು ಸೇವಿಸುವುದರಿಂದ ಅಲ್ಜೀಮರ್ ರೋಗ ಬರದಂತೆ ತಡೆಯಬಹುದು.
- ಎಲೆಕೋಸನ್ನು ಹಸಿಯಾಗಿ ಅರೆದು ರಸವನ್ನು ಹಿಂಡಿ ಈ ರಸವನ್ನು ತಲೆಗೆ ಹಚ್ಚಿ ಸುಮಾರು 45 ನಿಮಿಷ ಒಣಗಲು ಬಿಡಬೇಕು. ಹೀಗೆ ಮಾಡುವುದರಿಂದ ಕೂದಲು ಕಾಂತಿಯುಕ್ತ ಮತ್ತು ನುಣುಪಾಗುತ್ತದೆ.
- ಎಲೆಕೋಸನ್ನು ಸೇವಿಸುವುದರಿಂದ ಮೂಳೆಗಳಿಗೆ ಬಲ ನೀಡುವುದು. ಇದು ಪ್ರೋಟೀನ್ ಅನ್ನು ಬಿಡುಗಡೆ ಮಾಡಿ ಮೂಳೆಗಳ ಖನಿಜಾಂಶಗಳನ್ನು ಕಾಪಾಡುತ್ತದೆ.
- ಎಲೆಕೋಸು ರಕ್ತದಲ್ಲಿ ಸೇರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಜೊತೆಗೆ ಮೂತ್ರಪಿಂಡದ ಕ್ಷಮತೆಯನ್ನೂ ಹೆಚ್ಚಿಸುತ್ತದೆ.
- ಹಸಿಕೋಸನ್ನು ಅರೆದು ಹಿಂಡಿದ ರಸವನ್ನು ಕಲೆಯಿರುವ ಜಾಗಕ್ಕೆ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ಚರ್ಮವು ಕಲೆಯಿಲ್ಲದೇ ಸುಂದರವಾಗುತ್ತದೆ.
- ಕೋಸಿನ ರಸವನ್ನು ಸೇವಿಸುವುದರಿಂದ ಟರ್ಮದ ಅಡಿಭಾಗದಿಂದ ಉತ್ತಮ ಪೋಷಣೆ ದೊರಕುವುದಲ್ಲದೇ ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ಹೊರಹೋಗಲು ಸಾಧ್ಯವಾಗುತ್ತದೆ.
- ಎಲೆಕೋಸಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸ್ನಾಯುಗಳಲ್ಲಿ ಉಂಟಾಗಿರುವ ಹುಣ್ಣಿನಿಂದ ನಿಮಗೆ ಬಿಡುಗಡೆಯನ್ನೊದಗಿಸುತ್ತದೆ.
- ಹೊಟ್ಟೆಯಲ್ಲಿ ಉಂಟಾದ ಅಲ್ಜರಿಗೆ ಎಲೆಕೋಸು ಅತ್ಯುತ್ತಮ ಪರಿಹಾರವಾಗಿದೆ.
- ಎಲೆಕೋಸಿನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೂದಲ ಬೆಳವಣಿಗೆಯನ್ನು ಪ್ರಚೋದಿಸಿ ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.
- ಒಂದು ಕಪ್ ಎಲೆಕೋಸಿನಲ್ಲಿ ಕೇವಲ 33 ಕ್ಯಾಲೋರಿ ಮಾತ್ರ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದಂತಹ ಆಹಾರವಾಗಿದೆ.
- ಎಲೆಕೋಸಿನಲ್ಲಿರುವ ಸಲ್ಫರ್‌ಫೇನ್ ಮತ್ತು 13 ಸಿ ಅಂಶಗಳು ಕ್ಯಾನ್ಸರ್ ಬರದಂತೆ ತಡೆಯುತ್ತದೆ.
- ಎಲೆಕೋಸಿ ಯಥೇಚ್ಚವಾಗಿರುವ ಆಂಟಿ ಆಕ್ಸಿಡೆಂಟ್‌ಗಳು ತ್ವಚೆಯನ್ನು ಫ್ರೀರಾಡಿಕಲ್ಸ್‌ಗಳಿಂದ ರಕ್ಷಿಸುವುದಲ್ಲದೇ ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.
- ಎಲೆಕೋಸಿನಲ್ಲಿರುವ ಕೆ ಜೀವಸತ್ವವು ಮರೆವಿನ ರೋಗ ಬಾರದಂತೆ ತಡೆಯುವ ಶಕ್ತಿಯಿದೆ.
ಕೆಲವೊಮ್ಮೆ ನಮ್ಮ ನಮ್ಮ ಮನೆಯ ಅಂಗಳದಲ್ಲಿಯೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ತರಕಾರಿಗಳು ಇರುತ್ತವೆ. ಆದರೆ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೆ. ಎಲೆಕೋಸಿನಿಂದ ನಾವು ಪದಾರ್ಥಗಳಷ್ಟೇ ಅಲ್ಲದೇ ಸೌಂದರ್ಯವರ್ಧಕವನ್ನಾಗಿಯೂ ಬಳಸಬಹುದು. ಆದರೆ ಸೌಂದರ್ಯವರ್ಧಕವಾಗಿ ಬಳಸುವ ಮೊದಲು ಚರ್ಮರೋಗ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಒಳಿತು.