Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅವಳ ಜತೆ ಹೀಗೆ ಲೈಂಗಿಕ ಕ್ರಿಯೆ ನಡೆಸಿ

ಅವಳ ಜತೆ  ಹೀಗೆ ಲೈಂಗಿಕ ಕ್ರಿಯೆ ನಡೆಸಿ
ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2019 (20:32 IST)
ನಿಮ್ಮ ಮನದಲ್ಲಿ ಮಾತ್ರವಲ್ಲ ಇನಿಯನ ಬಳಿ ಮೊದಲ ಬಾರಿ ಬರುವಾಗ ಆಕೆಯಲ್ಲೂ ಕೌತುಕದ ಕವಾಟ ತೆರೆದಿರುತ್ತದೆ. ಹಗ್ಗ ಕಿತ್ತ ಹೋರಿಯಂತೆ ಆತನನ್ನು ನೋಡಿ ಎದೆಯ ಬಡಿತ ನೂರಿಪ್ಪತ್ತು ದಾಟಿರುತ್ತದೆ. ಹೇಗೋ ಏನೋ ಎಂಬ ಅಳಲು ಆಕೆಯ ಮನದಲ್ಲಿ ಮನೆಮಾಡಿರುತ್ತದೆ.

ಈಗಾಗಲೆ ಆಕೆಯನ್ನು ಹಲವು ಬಾರಿ ಸ್ಪರ್ಶಿಸಿದ್ದರೂ ಈ ಸ್ಪರ್ಶದಲ್ಲಿ ಏನೋ ಮುದವಿರುತ್ತದೆ. ಆಕೆಯಲ್ಲಿ ಕಾಮಕವನವನ್ನು ಅರಳಿಸುವುದು ಹೇಗೆ? ಏನು ಮಾಡಿದರೆ ಆಕೆ ನನಗೆ ಇನ್ನಷ್ಟು ಹತ್ತಿರವಾಗಬಹುದು? ಮಿಲನಮಹೋತ್ಸವವನ್ನು ಅವಿಸ್ಮರಣೀಯ ಮಾಡಲು ಏನು ಮಾಡಲಪ್ಪಾ ಅಂತ ಆತ ಪ್ರಶ್ನೆಯ ಸುಳಿಯಲ್ಲಿ ಸಿಲುಕಿರುತ್ತಾನೆ.

ಇದು ಯಾರು ಹೇಳಿಕೊಡುವ ಪಾಠವೂ ಅಲ್ಲ, ಕಲಿಯಲು ನಾವು ವಿದ್ಯಾರ್ಥಿಗಳೂ ಅಲ್ಲ. ಎರಡು ಮನಸ್ಸುಗಳು, ಹೃದಯಗಳು ಬೆರೆತಾಗ, ಉಸಿರು ಒಂದಾದಾಗ, ಬಟ್ಟೆ ಕಳಚಿ ಬೆತ್ತಲಾದಾಗ ನಮ್ಮ ದೇಹವೇ ಕಾಮದಾಟದ ಮೈದಾನವಾಗುತ್ತದೆ, ನಾವೇ ಕಾಮಪಾಠದ ವಿಶ್ವವಿದ್ಯಾಲಯವಾಗುತ್ತೇವೆ.

ಟ್ಯೂಬ್ ಲೈಟ್ ಆರಿಸಿ, ಲಾಸ್ಯವಾಡುವ ಬೆಳಕಿನ ಮೊಂಬತ್ತಿಗಳನ್ನು ಉರಿಸಿರಿ. ಆ ನಯವಾಗಿ ಉರಿಯುವ ಬೆಳಕಿನಲ್ಲಿ ಕಾಮದ ಕಿಡಿ ಝಗ್ಗನೆ ಹೊತ್ತಿಕೊಂಡಿರುತ್ತದೆ.  

ಬಟ್ಟೆಯನ್ನು ಕಿತ್ತುಬಿಸಾಡಿ ದೇಹಗಳೆರಡು ಒಂದಾಗಲು ತವಕಿಸುತ್ತಿರುವಾಗ, ಸ್ಮಶಾನಮೌನದ ಆ ಸ್ಥಳದಲ್ಲಿ ಉದ್ವೇಗ ತುಂಬಿದ ಹೃದಯದ ಬಡಿತ ಕಿವಿಯನ್ನು ಅಪ್ಪಳಿಸುತ್ತಿರುತ್ತದೆ. ಅದರ ಜೊತೆಗೆ ಮನವನ್ನು ಹಗುರ ಮಾಡುವ, ಕಿವಿಗೆ ಇಂಪಾದ ರೋಮ್ಯಾಂಟಿಕ್ ಹಾಡು ದೂರದಲ್ಲೆಂದಲೋ ಕೇಳಿಬರುವಂತಿದ್ದರೆ ಅದರ ಮಜಾನೇ ಬೇರೆ.

ಹಾಸಿಗೆಯ ಮೇಲೆ ಹರಡಿದ ಮಲ್ಲಿಗೆಯ ಕಂಪು, ಹೊಸದಾದ ಕಟ್ಟಿರುವ ಹಾರಾಡುವ ಕರ್ಟನ್ನುಗಳು ಸೂಸುವ ಆ ವಿಚಿತ್ರ ವಾಸನೆಯ ಜೊತೆಗೆ ಆಕೆಯ ಕಂಕುಳ ಸಂದಿಯ ಬೆವರಿನ ವಾಸನೆಯನ್ನು ಮೂಸಲು ನಾಸಿಕ ತುದಿಗಾಲ ಮೇಲೆ ನಿಂತಿರುತ್ತದೆ. ಇದರ ಜೊತೆಗೆ ಇಡೀ ಕೋಣೆಯನ್ನು ಆವರಿಸಿಕೊಳ್ಳುವಂತೆ ಹಿತವಾದ ಊದುಬತ್ತಿಯ ಪರಿಮಳ ಪಸರಿಸುತ್ತಿದ್ದರೆ ಅದರ ಸುಖ, ಮಜಾನೇ ಬೇರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಜೀವನವಿಡೀ ಮದುವೆಯಾಗದೇ ಆತ್ಮರತಿಯಲ್ಲೇ ತೃಪ್ತಿಪಟ್ಟುಕೊಳ್ಳಬೇಕೆಂದಿದ್ದೇನೆ