Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಾದರೂ ಮಗು ಆಗುತ್ತಿಲ್ಲ : ಪ್ರಿಯಕರನ ಜೊತೆ ಮಲಗಲೇ?

ಮದುವೆಯಾದರೂ ಮಗು ಆಗುತ್ತಿಲ್ಲ : ಪ್ರಿಯಕರನ ಜೊತೆ ಮಲಗಲೇ?
ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2019 (15:32 IST)
ಸಮಸ್ಯೆಸರ್ ನನಗೀಗ 30 ವರ್ಷನನ್ನ ಯಜಮಾನರಿಗೆ 35 ವರ್ಷವಾಗಿದೆಮದುವೆಯಾಗಿ  ನಾಲ್ಕು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆನಾವಿಬ್ರೂ ತುಂಬಾ ಚೆನ್ನಾಗಿ ಇದ್ದೇವೆ.

ಮಗು ಬೇಕೆಂದು ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ. ಇದು ನಮಗೆ ದೊಡ್ಡ ಚಿಂತೆಯಾಗಿದೆ. ಗೆಳೆಯನಿಂದ ಮಗು ಪಡೆಯಲು ಮುಂದಾಗಲೇ?  ಪರಿಹಾರ ತಿಳಿಸಿ.


ಸಲಹೆನಿಮಗಿನ್ನೂ  ಮಕ್ಕಳಾಗುವ ಸಾಧ್ಯತೆ ಹೆಚ್ಚಿದೆಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆಸಂಬೋಗದ ನಂತರ ಯೋನಿಯಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ.

ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗ ಹೊಂದದೇ ಇರುವುದೂ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆಇಂಥ ಸಂದರ್ಭಗಳಿಂದ ಅಂಡಾಣು ಫಲಿತವಾಗುವುದು ಕಷ್ಟವಾಗುತ್ತದೆಒಂದು ಋತುಚಕ್ರದ ನಿಗದಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಲ್ಲಿ ಅಂಡಾಣು ಭ್ರೂಣ ಕಟ್ಟುವಲ್ಲಿ ವಿಫಲವಾಗುತ್ತದೆವಿವಾಹಿತರ ನಡುವೆ  ದಿನಗಳಲ್ಲಿ ಮಿಲನವಾಗದೇ ಇರುವಂಥ ಪರಿಸ್ಥಿತಿಗಳಲ್ಲಿ ಗರ್ಭಧಾರಣೆ ಕಷ್ಟವಾಗುತ್ತದೆ

ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30 ನಂತರಕೆಲವು  ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ.

35 ನಂತರ ಸಂತಾನೋತ್ಪತ್ತಿಯ ಸಾಮಥ್ರ್ಯ ಕಡಿಮೆಯಾಗುತ್ತ ಹೋಗುತ್ತದೆಗರ್ಭಧಾರಣೆಯ ಸಾಧ್ಯತೆಯೂ ಇಳಿಕೆಯಾಗುತ್ತ ಹೋಗುತ್ತದೆ.

35 ವರ್ಷಗಳನ್ನು ದಾಟಿರುವ ಮಹಿಳೆಯರು 6 ತಿಂಗಳ ಸತತ ಯತ್ನದ ನಂತರವೂ ಗರ್ಭ ಧರಿಸದೇ ಇದ್ದಲ್ಲಿ ತಮ್ಮ ವೈದ್ಯರೊಂದಿಗೆ ಮತ್ತೊಮ್ಮೆ ಸಮಾಲೋಚಿಸುವುದು ಒಳಿತು. ಮಗುವಿಗಾಗಿ ಅನೈತಿಕ ಸಂಬಂಧಕ್ಕೆ ಮುಂದಾಗುವುದು ಸರಿಯಲ್ಲ.

 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯ ಸಂಭೋಗ ಮಾಡಿದ್ದು ಗಂಡನಿಗೆ ಗೊತ್ತಾದಾಗ