ಬೆಂಗಳೂರು : ಹಣ್ಣುಗಳು ನಮ್ಮನ್ನು ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ. ಹಣ್ಣುಗಳನ್ನು ಸೇವಿಸುವುದರಿಂದ ಹಲವು ರೋಗಗಳು ಬರದಂತೆ ತಡೆಗಟ್ಟಬಹುದು. ಅದರಲ್ಲಿ ಮೂರು ಹಣ್ಣುಗಳನ್ನು ಸೇವಿಸಿದರೆ ಬೊಜ್ಜು ಸಂಬಂಧಿ ರೋಗಗಳು, ಹೃದ್ರೋಗ, ಲಿವರ್ ರೋಗಗಳನ್ನು ತಡೆಗಟ್ಟಬಹುದು.
ಮಾನವರು ಅಧಿಕ ಕೊಬ್ಬಿನಂಶ ಇರುವ ಆಹಾರ ಸೇವಿಸಿದಾಗ ಅವು ದೇಹದಲ್ಲಿ ಶೇಖರಣೆಯಾಗುತ್ತವೆ. ಇದು ವ್ಯಕ್ತಿಗಳಲ್ಲಿ ಹೃದ್ರೋಗ, ಡಯಾಬಿಟಿಸ್, ಲಿವರ್ ಹಾನಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಕಿತ್ತಳೆ, ಮೂಸಂಬಿ ಮತ್ತು ನಿಂಬೆ ಈ ಮೂರು ಸಿಟ್ರಸ್ ಫ್ರೂಟ್ಗಳಲ್ಲಿ ಫ್ಲಾವನೊನೆಸ್ ಎಂಬ ಆಂಟಿ ಆಕ್ಸಡೆಂಟ್ಗಳು (ಉತ್ಕರ್ಷಣಗಳು) ಅಧಿಕ ಪ್ರಮಾಣದಲ್ಲಿ ಇರುತ್ತವೆ. ಸಿಟ್ರಸ್ ಯುಕ್ತ ಹಣ್ಣುಗಳ ಸೇವನೆಯಿಂದ ದೇಹದ ಅನಗಗತ್ಯ ಕೊಬ್ಬನ್ನು ಕರಗಿಸುತ್ತವೆ ಹಾಗೂ ಗಂಡಾಂತರ ರೋಗಗಳ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.