Publish Date: Sat, 03 Aug 2019 (06:46 IST)
Updated Date: Sat, 03 Aug 2019 (06:47 IST)
ಬೆಂಗಳೂರು : ಜೀವನದಲ್ಲಿ ಪದೇ ಪದೇ ಎದುರಾಗುವ ಸಮಸ್ಯೆಗಳೆಂದರೆ ಅದು ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ. ಹಣವಿದ್ದ ಕಡೆ ಆರೋಗ್ಯವಿರಲ್ಲ, ಆರೋಗ್ಯವಿದ್ದ ಕಡೆ ಹಣವಿರಲ್ಲ ಈ ಕಷ್ಟದ ನಡುವೆಯೇ ಜೀವನ ನಡೆಯುತ್ತಲೇ ಇರುತ್ತದೆ. ಆದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿರುವಂತೆ ಈ ಸಮಸ್ಯೆಗಳಿಗೂ ಪರಿಹಾರವಿದೆ. ಅದು ಏನೆಂಬುದು ಇಲ್ಲಿದೆ ನೋಡಿ.
ಅನ್ನ ಪರಬ್ರಹ್ಮ ಸ್ವರೂಪ ಎಂದು ಹೇಳುತ್ತಾರೆ. ಬಿಳಿ ಅನ್ನದಿಂದ ಮಾಡುವ ಪೂಜೆಗಳು ಅನೇಕ ಶುಭ ಫಲಗಳನ್ನು ನೀಡುತ್ತವೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ. ಎಲ್ಲ ದಾನಗಳಿಗಿಂತ ಶ್ರೇಷ್ಠದಾನ ಅನ್ನದಾನ. ಅಂತಹ ಅನ್ನದಿಂದ ಭಗವಂತನನ್ನು ಪೂಜಿಸಿದರೆ ಸರ್ವಕಷ್ಟಗಳು ನಿವಾರಣೆಯಾಗುತ್ತದೆ.
ಅನ್ನದಿಂದ ಶಿವಲಿಂಗವನ್ನು ಮಾಡಿ ಪೂಜಿಸಿ, ನೀರಿನಲ್ಲಿ ತೇಲಿ ಬಿಟ್ಟರೆ, ಹಣದ ಕೊರತೆ ಎದುರಾಗುವುದಿಲ್ಲ. ಎಷ್ಟೇ ಕಷ್ಟಗಳಿದ್ದರೂ, ಎಷ್ಟೇ ಬಡತನವಿದ್ದರೂ ನಿವಾರಣೆಯಾಗುತ್ತದೆ. ಹಾಗೇ ಅನ್ನಕ್ಕೆ ಜೇನು ತುಪ್ಪವನ್ನು ಕಲಸಿ, ಅದನ್ನು ನೈವೇದ್ಯವಾಗಿ ಸಮರ್ಪಿಸಿದರೆ, ಎಲ್ಲಾ ತರಹದ ಚರ್ಮ ರೋಗಗಳು ದೂರವಾಗುತ್ತವೆ. ಬಿಳಿ ಅನ್ನಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ಸಕ್ಕರೆ, ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆ ಸೇರಿಸಿ, ಆ ಅನ್ನವನ್ನು ದೇವತೆಗಳಿಗೆ ನೈವೇದ್ಯವಾಗಿ ಸಮರ್ಪಿಸಿದರೆ ಅದನ್ನು ದಾನ ಮಾಡಿದರೆ ಸಕಲ ರೋಗಗಳು ವಾಸಿಯಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.