Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

3 ದಿನ ಈ 3 ವಿಧಾನವನ್ನು ಅನುಸರಿಸಿದರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುವುದು

3 ದಿನ ಈ 3 ವಿಧಾನವನ್ನು ಅನುಸರಿಸಿದರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುವುದು
ಬೆಂಗಳೂರು , ಶನಿವಾರ, 3 ಆಗಸ್ಟ್ 2019 (06:48 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಅಥವಾ ಹೊರಗಡೆ ಹೆಚ್ಚಾಗಿ ಸುತ್ತಾಡುವುದರಿಂದ ಮುಖದ ಕಾಂತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಮುಖದ ಅಂದ ಕಡಿಮೆಯಾಗುತ್ತದೆ. ಆದ್ದರಿಂದ 3 ದಿನ ಈ ಮೂರು ರೀತಿಯಲ್ಲಿ ತ್ವಚೆಯ ಆರೈಕೆ ಮಾಡಿದರೆ ನಿಮ್ಮ ಕಾಂತಿ ಮೂರೇ ದಿನದಲ್ಲಿ ಹೆಚ್ಚಾಗುತ್ತದೆ.




*ಮೊದಲನೇಯ ದಿನ: ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್‌ ರೀತಿ ಮಾಡಿ ಅದಕ್ಕೆ 1 ಚಮಚ ಹಸಿ ಹಾಲು ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.


*ಎರಡನೇಯ ದಿನ: ಅರ್ಧ ಗ್ಲಾಸ್‌ ಅಕ್ಕಿಯನ್ನು ನೀರಿಗೆ ನೆನೆ ಹಾಕಿ ಅರ್ಧ ಗಂಟೆಯ ಬಳಿಕ ಆ ನೀರಿನಿಂದ ಮುಖ ತೊಳೆಯಿರಿ, ಆ ನೀರು ಮುಖದಲ್ಲಿ ಹಾಗೇ ಒಣಗಲಿ. ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.


*ಮೂರನೇಯ ದಿನ: ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತುರಿಯಿರಿ. ಈಗ ಇದಕ್ಕೆ ಅರ್ಧ ದಾಳಿಂಬೆಯ ಬೀಜಗಳನ್ನು ಹಾಕಿ 1 ಚಮಚ ನೀರು ಹಾಕಿ ಗ್ರೈಂಡ್‌ ಮಾಡಿ, ನಂತರ 1 ಚಮಚ ನಿಂಬೆ ಸರ ಸೇರಿಸಿ. ನಂತರ ಇವುಗಳನ್ನು ಐಸ್ ಕ್ಯೂಬ್‌ ಟ್ರೇಗೆ ಹಾಕಿ ಫ್ರೀಜರ್‌ನಲ್ಲಿ ಇಡಿ. ದಿನಾ ಒಂದೊಂದು ಐಸ್ ಕ್ಯೂಬ್‌ ತೆಗೆದು 5 ನಿಮಿಷ ಮಸಾಜ್‌ ಮಾಡಿ ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳೊಂದಿಗೆ ಆ ಕೆಲಸ ಮಾಡೋವಾಗ ಹೀಗ್ಯಾಕೆ ಆಗ್ತಿದೆ?