ಬೆಂಗಳೂರು: ಹೊಟ್ಟೆ ಹುಳ ಸಮಸ್ಯೆಯಿಂದ ಆಗಾಗ ಹೊಟ್ಟೆ ನೋವು, ಹಸಿವಿಲ್ಲದಿರುವಿಕೆ ಮುಂತಾದ ಸಮಸ್ಯೆಗಳು ಬರುವುದು ಸಹಜ. ಹೊಟ್ಟೆ ಹುಳ ಸಮಸ್ಯೆಯನ್ನು ಕೆಲವು ಆಹಾರಗಳಿಂದ ಪರಿಹರಿಸಬಹುದು.
ದಾಳಿಂಬೆ
ದಾಳಿಂಬೆ ಹಣ್ಣುಹಲವು ರೀತಿಯ ಹೊಟ್ಟೆ ಹುಳಗಳಿಗೆ ಮಾರಕವಾಗಿ ಪರಿಣಮಿಸುತ್ತದೆ. ಹಾಗಾಗಿ ಹೊಟ್ಟೆ ಹುಳದ ಸಮಸ್ಯೆಯಿದ್ದರೆ ಸಾಕಷ್ಟು ದಾಳಿಂಬೆ ಸೇವಿಸಿ.
ಕ್ಯಾರೆಟ್
ಕ್ಯಾರೆಟ್ ನಲ್ಲಿ ಬೀಟಾ ಕೆರೊಟಿನ್, ವಿಟಮಿನ್ ಎ ಅಂಶ ಹೇರಳವಾಗಿದ್ದು, ಹೊಟ್ಟೆ ಹುಳದ ಮೊಟ್ಟೆಯನ್ನೇ ಕೊಲ್ಲುವಷ್ಟು ಪರಿಣಾಮಕಾರಿಯಾಗಿದೆ.
ಬೆಳ್ಳುಳ್ಳಿ
ಪ್ರತಿ ನಿತ್ಯ ಬೆಳ್ಳುಳ್ಳಿ ಎಸಳು ಸೇವಿಸುತ್ತಿದ್ದರೆ ಹಲವು ರೀತಿಯ ಹೊಟ್ಟೆ ಹುಳಗಳಿಂದ ಮುಕ್ತಿ ಪಡೆಯಬಹುದು.
ಪಪ್ಪಾಯ
ಆಯುರ್ವೇದದ ಪ್ರಕಾರ ಪಪ್ಪಾಯ ಹಣ್ಣಿನ ಬೀಜ ಕೂಡಾ ಹೊಟ್ಟೆ ಹುಳದ ಸಮಸ್ಯೆಗೆ ತಕ್ಕ ಪರಿಹಾರ ಕೊಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ