Publish Date: Fri, 02 Mar 2018 (09:40 IST)
Updated Date: Fri, 02 Mar 2018 (09:42 IST)
ಬೆಂಗಳೂರು: ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ನಿಂದ ರೆಸ್ಟೋರೆಂಟ್ ನಲ್ಲಿ ಹಲ್ಲೆಗೊಳಗಾದ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯಕ್ಕೆ ವಿದ್ವತ್ ಸ್ಥಿತಿಗತಿ ಸಧಾರಿಸುತ್ತಿದೆ ಎನ್ನಲಾಗಿದೆ. ಶೇ. 80 ರಷ್ಟು ಗಾಯಗಳು ಗುಣಮುಖವಾಗುತ್ತಿದೆ ಎನ್ನಲಾಗಿದೆ. ಸದ್ಯದಲ್ಲೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.
ಆದರೆ ಇನ್ನೂ ವಿದ್ವತ್ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿಲ್ಲ. ಮೊನ್ನೆಯಷ್ಟೇ ತನಿಖಾಧಿಕಾರಿಗಳು ಹೇಳಿಕೆ ಪಡೆಯಲು ಬಂದರೂ ತುಟಿಗೆ ಗಾಯವಾಗಿದ್ದರಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ. ಮೂಲಗಳ ಪ್ರಕಾರ ಇಂದು ಅಧಿಕಾರಿಗಳು ವಿದ್ವತ್ ಹೇಳಿಕೆ ಪಡೆಯುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Fri, 02 Mar 2018 (09:40 IST)
Updated Date: Fri, 02 Mar 2018 (09:42 IST)