ಬೆಂಗಳೂರು: ಖರ್ಜೂರ ಆರೋಗ್ಯಕ್ಕೆ ತುಂಬಾ ಲಾಭದಾಯಕ ಒಣ ಹಣ್ಣು. ದಿನಕ್ಕೆ 10 ಖರ್ಜೂರ ಸೇವಿಸಿ ನೋಡಿ. ಆರೋಗ್ಯದ ಮೇಲೆ ಎಂತಹಾ ಮ್ಯಾಜಿಕ್ ಮಾಡುತ್ತದೆ ಎಂದು ನೀವೇ ನೋಡಬಹುದು!
ಕೊಬ್ಬು ಕರಗಿಸುತ್ತದೆ
ಖರ್ಜೂರದಲ್ಲಿ ಕೊಬ್ಬಿನಂಶ ಕಡಿಮೆಯಿರುತ್ತದೆ. ತುಂಬಾ ಸಿಹಿ ಕೊಡುವ ಇದು ನಿಮ್ಮ ಆಹಾರದ ರುಚಿಯನ್ನೂ ಹೆಚ್ಚಿಸುತ್ತದೆ.
ರೋಗ ನಿರೋಧಕ
ಖರ್ಜೂರದಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಪ್ರತಿನಿತ್ಯ ಇದನ್ನು ಸೇವಿಸುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಪೊಟೇಷಿಯಂ
ಇದರಲ್ಲಿ ಪೊಟೇಷಿಯಂ ಅಂಶ ಹೆಚ್ಚಿರುವುದರಿಂದ ಆರೋಗ್ಯ ಸುಧಾರಿಸುವುದಲ್ಲದೆ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.
ಕಬ್ಬಿಣದಂಶ
ಕಬ್ಬಿಣದಂಶ ಹೇರಳವಾಗಿರುವುದರಿಂದ ರಕ್ತಹೀನತೆ, ನಿಶ್ಯಕ್ತಿಯಿಂದ ಬಳಲುತ್ತಿರುವವರಿಗೆ ಇದು ಲಾಭದಾಯಕ.
ಮಲಬದ್ಧತೆ
ಮಲಬದ್ಧತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ನೀರಲ್ಲಿ ನೆನೆ ಹಾಕಿದ ಖರ್ಜೂರ ಸೇವಿಸಿದರೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.