Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಿವಿಯಲ್ಲಿರುವ ಮಲೀನಗಳನ್ನು ತೊಲಗಿಸಲು ಸುಲಭ ಉಪಾಯ ಇಲ್ಲಿದೆ

ಕಿವಿಯಲ್ಲಿರುವ ಮಲೀನಗಳನ್ನು ತೊಲಗಿಸಲು ಸುಲಭ ಉಪಾಯ ಇಲ್ಲಿದೆ
ಬೆಂಗಳೂರು , ಶನಿವಾರ, 13 ಜನವರಿ 2018 (15:17 IST)
ಬೆಂಗಳೂರು : ಕಿವಿಯಲ್ಲಿರುವ ಮಲೀನವನ್ನು ಕೆಲವೆಡೆ ಹಲವು ವಿಧವಾಗಿ ಕರೆಯಲಾಗುತ್ತದೆ. ಧೂಳು, ನೀರಿನಂತಹ ಪದಾರ್ಥಗಳು ಕಿವಿಯೊಳಗೆ ಹೋಗಿ ತುರಿಕೆ, ನೋವು ಉಂಟಾಗುತ್ತದೆ. ಆ ಸಮಯದಲ್ಲಿ ಅವುಗಳನ್ನು ತೆಗೆಯಲು ಕೆಲವರು ಕಾಟನ್ ಬಡ್ಸ್ ಗಳನ್ನು ಬಳಸುತ್ತಾರೆ. ಹೀಗೆ ಅವುಗಳನ್ನು ಉಪಯೋಗಿಸುವುದು ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ.

 
ನಮ್ಮ ಶರೀರದ ಅತಿ ಸೂಕ್ಷ್ಮವಾದ ಭಾಗಗಳಲ್ಲಿ ಕಿವಿಯು ಒಂದು. ಆದ್ದರಿಂದ ಕಿವಿಯಲ್ಲಿರುವ ಮಲೀನಗಳನ್ನು ತೆಗೆಯಲು ಈ ರೀತಿ ಬಡ್ಸ್ ಗಳನ್ನು ಬಳಸಿದಾಗ ಒಳಗಿರುವ ನರಗಳಿಗೆ ಪೆಟ್ಟಾಗಿ  ಅಪಾಯವಾಗುವ ಸಂಭವವಿರುತ್ತದೆ. ಇದರಿಂದ ಕಿವಿಯ ಗ್ರಹಣ ಶಕ್ತಿ ಕಡಿಮೆಯಾಗುವುದು. ಅಲ್ಲದೆ ಮಲೀನಗಳು ಕಿವಿಯೊಳಗೆ ಹೋಗುವಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಆದ್ದರಿಂದ ಕಿವಿಯೊಳಗಿನ ಮಲೀನಗಳನ್ನು ತೆಗೆಯಲು ಪಿನ್ ಅಥವಾ ಬಡ್ಸ್ ಗಳನ್ನು ಬಳಸಬಾರದು. ಎಲ್ಲರ ಕಿವಿಯಲ್ಲೂ ಮಲೀನಗಳಿರುತ್ತದೆ. ಅದು ಕಿವಿಯ ನರಗಳಿಗೆ ರಕ್ಷಣೆ ನೀಡುವುದರ ಜೊತೆಗೆ ಕಿವಿಗೆ ಹೊರಗಿನಿಂದ ಯಾವುದೆ ಇನ್ ಫೆಕ್ಷನ್ ತಗಲದಂತೆ ನೋಡಿಕೊಳ್ಳುತ್ತದೆ. ಈ ಮಲೀನದಲ್ಲಿ ಆಂಟಿಆಕ್ಸಿಡೆಂಟ್ ಇದ್ದು ಅದು ಕಿವಿಗಳನ್ನು ಸ್ವಚ್ಚಗೊಳಿಸುತ್ತದೆ. ಕೆಲವರಿಗೆ ಇದು ಹೆಚ್ಚಾಗಿ ಕಂಡುಬರುತ್ತದೆ. ಆಗ ಅದನ್ನು ತೆಗೆಯಲು ಒಂದು ಸಹಜವಾದ ವಿಧಾನವಿದೆ.

 
ಕಿವಿಯಲ್ಲಿರುವ ಮಲೀನವನ್ನು ತೆಗೆಯಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೇರೆಸಿ ಅದರಲ್ಲಿ ಒಂದು ಹತ್ತಿ ಉಂಡೆಯನ್ನು ಅದ್ದಿ ತಲೆಯನ್ನು ಒಂದು ಕಡೆ ಭಾಗಿಸಿ ಮೇಲ್ಮುಖವಾಗಿರುವ ಕಿವಿಗೆ ಹತ್ತಿ ಉಂಡೆಯಲ್ಲಿರುವ ಉಪ್ಪು ನೀರನ್ನು ಕೆಲವು ಹನಿಗಳಷ್ಟು ಹಾಕಿಕೊಳ್ಳಬೇಕು. ನಂತರ 5 ನಿಮಿಷ ಬಿಟ್ಟು ಕಿವಿಯನ್ನು ಬಗ್ಗಿಸುವುದರಿಂದ ಅದರಲ್ಲಿರುವ ಮಲೀನಗಳು ಹೊರಗೆ ಬರುವುದು. ಹೀಗೆ ಎರಡು ಕಿವಿಗಳನ್ನು ಚೆನ್ನಾಗಿ ಶುಭ್ರಗೊಳಿಸಿದ ನಂತರ ಉಗುರು ಬೆಚ್ಚಗಿನ ನೀರಲ್ಲಿ ಸ್ವಚ್ಚಗೊಳಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಶಾಂಪೂ ತಯಾರಿಸೋದು ಹೇಗೆ ಗೊತ್ತಾ…?