ಬೆಂಗಳೂರು : ಹೆಚ್ಚಿನವರೂ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕೆ ಒಂ\ದು ಮುಖ್ಯ ಕಾರಣ ಕೆಮಿಕಲ್ ಯುಕ್ತ ಶಾಂಪುಗಳನ್ನು ಬಳಸುತ್ತಿರುವುದು. ಅದಕ್ಕಾಗಿ ಮನೆಯಲ್ಲೇ ಶಾಂಪುಗಳನ್ನು ತಯಾರಿಸಿ ಬಳಸಿ. ಇದರಿಂದ ಕೂದಲುದುರುವ ಸಮಸ್ಯೆ ಇರದೆ ಕೂದಲು ದಟ್ಟವಾಗಿಯೂ, ಸೊಂಪಾಗಿಯೂ ಬೆಳೆಯುತ್ತದೆ.
ಕರಿಬೇವಿನ ಎಲೆ 20 ತೆಗೆದುಕೊಂಡು ಅದನ್ನು ಬಿಸಿಲಲ್ಲಿ ಒಣಗಿಸಿ ನಂತರ ಪುಡಿ ಮಾಡಿಕೊಳ್ಳಿ. ಅದರಿಂದ 3 ಟೇಬಲ್ ಸ್ಪೂನ್ ಪುಡಿ ತೆಗೆದುಕೊಳ್ಳಿ. ನಿಂಬೆ ಹಣ್ಣನ್ನು ಕಟ್ ಮಾಡಿ ಬಿಸಿಲಲ್ಲಿ ಒಣಗಿಸಿ ನಂತರ ಅದನ್ನು ಪುಡಿಮಾಡಿಕೊಂಡು ಅದರಿಂದ 1 ಟೇಬಲ್ ಸ್ಪೂನ್ ಪುಡಿ ತೆಗೆದುಕೊಳ್ಳಿ. ನಂತರ ಸೀಗೆಕಾಯಿ ಪುಡಿ 3 ಟೇಬಲ್ ಸ್ಪೂನ್, ಮೆಂತ್ಯ ಪುಡಿ 2 ಟೇಬಲ್ ಸ್ಪೂನ್, ಹೆಸರುಕಾಳು ಪುಡಿ 2 ಟೇಬಲ್ ಸ್ಪೂನ್ ಇವಿಷ್ಟನ್ನು ತೆಗೆದುಕೊಂಡು ಒಂದು ಬೌಲಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಗಾಜಿನ ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಸ್ನಾನ ಮಾಡುವಾಗ ಈ ಪುಡಿಗಳ ಮಿಶ್ರಣವನ್ನು ತೆಗೆದುಕೊಂಡು ನೀರಲ್ಲಿ ಮಿಕ್ಸ್ ಮಾಡಿ ಶಾಂಪು ತರಹ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿ. ಇದು ಕೂದಲಿಗೆ ತುಂಬಾ ಉಪಯುಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ