ಬೆಂಗಳೂರು : ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಸರಿಯಾಗಿ ನೀರು ಕುಡಿದರೆ ನಿಮ್ಮ ದೇಹ ಆರೋಗ್ಯವಾಗಿರುತ್ತದೆ. ಆದರೆ ರಾತ್ರಿ ಮಲಗುವ ಮೊದಲು ನೀರು ಕುಡಿಯುವುದು ಉತ್ತಮವೇ? ಈ ಬಗ್ಗೆ ತಿಳಿದುಕೊಳ್ಳೊಣ.
ಪ್ರತಿದಿನ ರಾತ್ರಿ ನೀರು ಕುಡಿಯುವುದರಿಂದ ಇಡೀ ದಿನದ ಒತ್ತಡ ಕಡಿಮೆಯಾಗಿ ಸರಿಯಾಗಿ ನಿದ್ರೆ ಬರುತ್ತದೆ. ಸ್ನಾಯುಗಳಿಗೆ ಆರಾಮ ಸಿಗುತ್ತದೆ. ರಾತ್ರಿ ಒಂದು ಲೋಟ ಬಿಸಿ ನೀರು ಕುಡಿದರೆ ತೂಕ ಇಳಿಕೆಯಾಗುತ್ತದೆ. ಜೀರ್ಣಶಕ್ತಿ ಉತ್ತಮವಾಗುತ್ತದೆ. ಅಷ್ಟೇ ಅಲ್ಲದೆ ರಕ್ತ ಸಂಚಲನ ಸರಿಯಾಗಿ ಹೃದಯ ಸಮಸ್ಯೆ ಕಾಡುವುದಿಲ್ಲ. ಹಾಗೇ ನೀರು ದೇಹದ ಖನಿಜ ಹಾಗೂ ಜೀವಸತ್ವವನ್ನು ಸಮತೋಲನದಲ್ಲಿಟ್ಟು ದೇಹದ ಸಂಪೂರ್ಣ ಆರೋಗ್ಯ ಕಾಪಾಡುತ್ತದೆ.